ಮನನೊಂದು ವ್ಯಕ್ತಿ ಆತ್ಮಹತ್ಯೆ

30871e26-0443-4d90-a9d5-86252628dc0e
ಮೀನಸಾಬ್ ಮಸ್ತಾನಸಾಬ್ ತನಶ್ಯಾಳ
Published on

ಬಾಗಲಕೋಟೆ: ಅನಾರೋಗ್ಯಕ್ಕೆ ಮನನೊಂದು ವ್ಯಕ್ತಿ ಓರ್ವ ಹಿನ್ನೀರು ಪ್ರದೇಶ ಕ್ವಾರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.

ಅಮೀನಸಾಬ್ ಮಸ್ತಾನಸಾಬ್ ತನಶ್ಯಾಳ (೪೫) ಮೃತ ದುರ್ದೈವಿ. ಅಮೀನಸಾಬ್ ಅನರಾಗೋಗ್ಯದಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜು.೫ರಂದು ಕ್ವಾರಿ ದಡದಲ್ಲಿ ಚಪ್ಪಲಿ, ಮೊಬೈಲ್ ಇಟ್ಟು ಕ್ವಾರಿಗೆ ಜಿಗಿದಿದ್ದರು. ಜು.೭ ರಂದು ನೀರಿನಿಂದ ಮೃತದೇಹ ಹೊರ ಬಂದಿದೆ. ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net