ಕರ್ನಾಟಕ ಬ್ಯಾಂಕ್‌ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಿಜಿ ಎಸ್.ಎಸ್.

ಬಿಜಿ ಎಸ್ ಎಸ್
ಬಿಜಿ ಎಸ್ ಎಸ್
Published on

ಪ್ರಮುಖ ಮುಖ್ಯಾಂಶಗಳು

  • ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ 31 ವರ್ಷಗಳ ಸುದೀರ್ಘ ಸೇವೆ
ಮಂಗಳೂರು: ಕರ್ನಾಟಕ ಬ್ಯಾಂಕ್, ತನ್ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಬಿಜಿ ಶ್ರೀಕೃಷ್ಣ ವಿಲಾಸ್ ಶಂಕರನಾರಾಯಣನ್ (ಬಿಜಿ ಎಸ್.ಎಸ್.) ಅವರನ್ನು ನೇಮಕಗೊಳಿಸಿದೆ.
ಬಿಜಿ ಎಸ್.ಎಸ್. ಅವರು ಕಾರ್ಪೊರೇಟ್ ಬ್ಯಾಂಕಿಂಗ್, ರೀಟೇಲ್ ಮತ್ತು ಬ್ರಾಂಚ್ ಬ್ಯಾಂಕಿಂಗ್, ಲಯಬಿಲಿಟೀಸ್, ಸೆಕ್ಯೂರ್ಡ್ ಅಸೆಟ್ಸ್, ಬ್ಯಾಂಕಿಂಗ್ ರೂಪಾಂತರ ಹಾಗೂ ಡಿಜಿಟಲ್ ಆಧುನೀಕರಣ ಸೇರಿದಂತೆ ಸೌತ್ ಇಂಡಿಯನ್ ಬ್ಯಾಂಕ್‌ನಲ್ಲಿ 31 ವರ್ಷಗಳ ಸುದೀರ್ಘ ಮತ್ತು ಸಮಗ್ರ ಅನುಭವ ಹೊಂದಿರುವ ಕಾರ್ಯತಂತ್ರದ ಬ್ಯಾಂಕಿಂಗ್ ತಜ್ಞರಾಗಿದ್ದಾರೆ.
ಅವರು ದೇಶಾದ್ಯಂತದ ಬ್ಯಾಂಕಿಂಗ್ ಜಾಲಗಳನ್ನು ಸ್ವತಂತ್ರ ಲಾಭದಾಯಕ ಕೇಂದ್ರಗಳಾಗಿ ಮುನ್ನಡೆಸುವಲ್ಲಿ, ಕಾರ್ಪೊರೇಟ್ ಬ್ಯಾಂಕಿಂಗ್ ವಿಭಾಗಗಳನ್ನು ವಿಸ್ತರಿಸುವಲ್ಲಿ, ಅಪಾಯ ನಿರ್ವಹಣಾ ಚೌಕಟ್ಟುಗಳನ್ನು ಬಲಪಡಿಸುವಲ್ಲಿ, ಆಸ್ತಿ ಗುಣಮಟ್ಟವನ್ನು ಸುಧಾರಿಸುವಲ್ಲಿ, ಗ್ರಾಹಕರ ಸ್ವಾಧೀನ ಮಾದರಿಗಳನ್ನು ಹೆಚ್ಚಿಸುವಲ್ಲಿ ಮತ್ತು ಡಿಜಿಟಲ್ ಕಾರ್ಯವಿಧಾನವನ್ನು ಉನ್ನತೀಕರಿಸುವಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡಿದವರಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net