

ತರೀಕೆರೆ: ಅಜ್ಜಂಪುರ ತಾಲೂಕು ಬಗ್ಗವಳ್ಳಿ ಗ್ರಾಪಂನ ನೂತನ ಅಧ್ಯಕ್ಷರಾಗಿ ಬಿ.ಜಿ.ಗುರುಮೂರ್ತಿ, ಉಪಾಧ್ಯಕ್ಷೆಯಾಗಿ ಚಂದ್ರಮತಿ ಅವಿರೋಧ ಆಯ್ಕೆಯಾದರು.
ಆಂತರಿಕ ಒಪ್ಪಂದದಂತೆ ಹಿಂದಿನ ಅಧ್ಯಕ್ಷೆ ಶೈಲಾ ಮತ್ತು ಉಪಾಧ್ಯಕ್ಷೆ ಚಂದ್ರಮ್ಮ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಜಿ.ಗುರುಮೂರ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಮತಿ ಮಾತ್ರ ನಾಮಪತ್ರ ಸಲ್ಲಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಇಒ ಎಂ.ಕೆ.ವಿಜಯಕುಮಾರ್ ಇಬ್ಬರ ಅವಿರೋಧ ಘೋಷಿಸಿದರು.
ನೂತನ ಅಧ್ಯಕ್ಷ ಬಿ.ಜಿ.ಗುರುಮೂರ್ತಿ ಮಾತನಾಡಿ, ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸಲಾಗುವುದು. ಸದಸ್ಯರು 2ನೇ ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿಬಾರದಂತೆ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಸದಸ್ಯರಾದ ಸಿ.ಎಸ್.ಸಿದ್ದೇಗೌಡ, ಚಂದ್ರಮ್ಮ, ಷಡಾಕ್ಷರಪ್ಪ, ಬಿ.ಎಸ್.ದಯಾನಂದ್, ಹೊನ್ನಮ್ಮ, ಕಮಲಮ್ಮ, ಪಿಎಸಿಎಸ್ ಅಧ್ಯಕ್ಷ ನಾಗಭೂಷಣ, ಪಿಡಿಒ ಎಚ್.ಎಂ.ಶೇಖರ್ ಮತ್ತಿತರರಿದ್ದರು.