ಪ್ರತಿಭಾ ಪುರಸ್ಕಾರಕ್ಕೆ ಚಾಲನೆ

20GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಬಿ. ಜಿ.ಅಣ್ಣಿಗೇರಿ ಗುರುಗಳು ಸೇವೆ ಅಮೋವಾಗಿದೆ. ಗುರುಕುಲ ಮಾದರಿಯ ಆಶ್ರಮದಲ್ಲಿ ಇಂದಿಗೂ ನಿತ್ಯ ಅನುಭವಿಕ ಶಿಕ ತಂಡದಿಂದ ಅರ ದಾಸೋಹ ನಡೆದಿರುವದು ಅಭಿನಂದನೀಯ ಎಂದು ಗದಗ ಗ್ರಾಮೀಣ ೇತ್ರ ಶಿಣಾ-ಕಾರಿ ವಿ. ವಿ. ನಡುವಿನಮನಿ ಹೇಳಿದರು.
ತಾಲೂಕಿನ ಕಣವಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ಅಣ್ಣಿಗೇರಿ ಗುರುಗಳು ನಗರದಲ್ಲಿ ತಾವಿದ್ದ ಕೊಠಡಿಯಲ್ಲಿ ಕೆಲವು ವಿದ್ಯಾಥಿರ್ಗಳಿಗೆ ಟ್ಯೂಶನ್​ ಹೇಳುವ ಪರಿಪಾಠ ಇಟ್ಟುಕೊಂಡವರು. ಈ ಟ್ಯೂಶನ್​ ಹೇಳುವ ಸುದ್ದಿ ಇತರ ವಿದ್ಯಾಥಿರ್ಗಳಿಗೆ ಪ್ರೇರಣೆಯಾಗಿ ಕಾಲಕ್ರಮೇಣ ಅದು ಗುರುಕುಲ ಮಾದರಿಯಲ್ಲಿ ಬೆಳೆದು ತರುವಾಯ ಅವರ ಶಿಷ್ಯರು ಈ ಗುರುಕುಲವನ್ನು ಪ್ರಗತಿಪಥದಲ್ಲಿ ಮುನ್ನಡೆಸಿಕೊಂಡು ಬಂದಿರುವುದು ಶ್ಲಾನೀಯ. ಪ್ರತಿಭಾನ್ವಿತ ವಿದ್ಯಾಥಿರ್ಗಳಿದ್ದಲ್ಲಿಯೇ ಬಂದು ಪ್ರತಿಭಾನ್ವಿತರಿಗೆ ಪ್ರತಿಷ್ಠಾನವು ಪುರಸ್ಕರಿಸುತ್ತಿರುವದು ಇತರ ವಿದ್ಯಾಥಿರ್ಗಳಿಗೆ ಸ್ಪೂತಿರ್, ಪ್ರೇರಣೆ ನೀಡಿದಂತಾಗಿದೆ. ಅಣ್ಣಿಗೇರಿ ಗುರುಗಳ ಗುರುಕುಲ ಆಶ್ರಮದಲ್ಲಿ ನಡೆಯುತ್ತಿರುವ ಅರ ದಾಸೋಹ ಜ್ಞಾನ ದಾಸೋಹ ನಿತ್ಯ ನಿರಂತರವಾಗಿರಲಿ ಎಂದರು.
ಜಿಮ್ಸ್​ ವೈದ್ಯಾ-ಕಾರಿ ಡಾ. ಜಿ. ಎಸ್​. ಪಲ್ಲೇದ, ಡೈಟ್​ ಉಪನ್ಯಾಸಕ ಶಂಕರ ಹಡಗಲಿ, ಯಲ್ಲಪ್ಪ ಕಲ್ಯಾಣಿ, ಬಸಪ್ಪ ಸೋಗಿ, ಶಿವಕುಮಾರ ಪಾಟೀಲ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net