ಹುಷಾರ್... ಇದು ಸರಾಫ್ ಬಜಾರ್ ರಸ್ತೆ

19 LXR 3
Published on

ಲಕ್ಷ್ಮೇಶ್ವರ: ಸದಾ ಜನಸಂದಣಿ, ವಾಹನ ದಟ್ಟಣೆಯಿಂದ ಕೂಡಿರುವ ಪಟ್ಟಣದ ಸರಾಫ್ ಬಜಾರ್ ರಸ್ತೆಗೆ ಅಡ್ಡಲಾಗಿ ಹಾಕಿರುವ ಸಿಮೆಂಟ್ ಹೊದಿಕೆ ಕಿತ್ತು ವರ್ಷಗಳೇ ಕಳೆದಿವೆ. ಒಂದು ಗಂಟೆಯಲ್ಲಿ ಸರಿಪಡಿಸಬಹುದಾದ ಈ ರಸ್ತೆಯ ದುರಸ್ತಿಗೆ ಪುರಸಭೆ, ವಾರ್ಡಿನ ಸದಸ್ಯ ಸೇರಿ ಯಾರೊಬ್ಬರೂ ಗಮನ ಹರಿಸಿಲ್ಲ. ಮುಖ್ಯ ಬಜಾರ್, ಶಾಲೆ, ಆಸ್ಪತ್ರೆ, ಮೈಲಾರಲಿಂಗೇಶ್ವರ ದೇವಸ್ಥಾನ ಸಂಪರ್ಕಿಸುವ ಈ ರಸ್ತೆಗೆ ಅಳವಡಿಸಿದ್ದ ಸಿಡಿ ಕಿತ್ತು ಕಬ್ಬಿಣದ ಸರಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಅನೇಕರು ತೊಂದರೆಗೂ ಒಳಗಾಗಿದ್ದಾರೆ. ಸಂಚಾರಕ್ಕೆ ಅಡಚಣೆಯಾದ ಸಂದರ್ಭದಲ್ಲಿ ಹಾಕಲಾಗಿದ್ದ ಅಗಲವಾದ ಕಲ್ಲು(ಹಾಸಿಗಲ್ಲು) ಕಿತ್ತು ಬಿದ್ದಿವೆ. ಸಮಸ್ಯೆ ನಡುವೆಯೂ ಶಾಲಾ ಮಕ್ಕಳು, ವೃದ್ಧರು, ಸವಾರರು ಓಡಾಡುತ್ತಿದ್ದಾರೆ. ಅತ್ಯಂತ ಇಕ್ಕಟ್ಟಾಗಿ, ಸಮಸ್ಯೆಯಿಂದ ಕೂಡಿದ್ದರೂ ಅನಿವಾರ್ಯವಾಗಿರುವ ಈ ರಸ್ತೆಯನ್ನು ಪುರಸಭೆಯವರು ದುರಸ್ತಿ ಪಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net