ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಿ

20 nrp 1
Published on

ಎನ್.ಆರ್.ಪುರ: ಸೋಂಕಿತ ಮಂಗನಿಗೆ ಕಚ್ಚಿರುವ ಉಣುಗು ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ಹರಡುತ್ತದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆ ಸಾಂಕ್ರಾಮಿಕ ರೋಗ ಶಾಸ್ತ್ರ ತಜ್ಞ ಡಾ.ಆಕರ್ಷ ಹೇಳಿದರು.

ಹೊನ್ನೇಕೊಡಿಗೆ ಗ್ರಾಪಂನ ವರ್ಕಾಟೆ ಕಾಲನಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜುಶ್ರೀ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ಲೆವಿ ಎಂಬ ವೈರಸ್‌ನಿಂದ ಮಂಗನ ಕಾಯಿಲೆ ಬರುತ್ತದೆ. ಮಂಗನ ಕಾಯಿಲೆ ಬಂದವರಿಗೆ ಮೈ ಕೈ ನೋವು, ವಾಕರಿಕೆ, ವಸಡಿನಲ್ಲಿ ರಕ್ತ ಸ್ರಾವ ಉಂಟಾಗುತ್ತದೆ. ಈ ಲಕ್ಷಣ ಕಂಡು ಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ಬಂದು ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ ಎಂದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಿಕ ದರ್ಶನಾಥ್ ಮಾತನಾಡಿ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಿಂದ ದೇಹದಲ್ಲಿ ಅಪೌಷ್ಠಿಕತೆ ಉಲ್ಬಣವಾಗುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ಅಪೌಷ್ಠಿಕತೆ ಎನ್ನಲಾಗುವುದು ಎಂದರು.

ರಾಷ್ಟ್ರೀಯ ಕಿಶೋರಿ ಸ್ವಾಸ್ತ ಕಾರ್ಯಕ್ರಮದ ಸಮಾಲೋಚಕ ಸುಹಾಸ್, ಧರ್ಮಸ್ಥಳ ಯೋಜನೆಯ ಆಂತರಿಕ ಲೆಕ್ಕ ಪರಿಶೋಧಕ ಪ್ರದೀಪ್, ರಾಧಮ್ಮ ವಹಿಸಿದ್ದರು. ಭಾನುಮತಿ, ಲೀಲಾವತಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net