ಆಧುನಿಕ ತಂತ್ರಜ್ಞಾನದಿಂದ ಉತ್ತಮ ಇಳುವರಿ

25sor4
ಸೊರಬ ತಾಲೂಕು ಕುಣಜಿಬೈಲ್ ಗ್ರಾಮದಲ್ಲಿ ಕೃಷಿ ಅಧಿಕಾರಿ ಸಂಜೀವ್, ರೈತ ಮಹಿಳೆಯರಾದ ನಾಗರತ್ನಾ, ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
Published on

ಸೊರಬ: ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು ರೈತರು ಸಹ ಕೃಷಿಯಲ್ಲಿ ಆಧುಕನಿಕತೆ ಬೆಳೆಸಿಕೊಂಡರೆ ಉತ್ತಮ ಇಳುವರಿ ಪಡೆಯಬಹುದು ಎಂದು ಕೃಷಿ ಅಧಿಕಾರಿ ಸಂಜೀವ್ ಹೇಳಿದರು.
ಶುಕ್ರವಾರ ತಾಲೂಕಿನ ಕುಣಜಿಬೈಲ್ ಗ್ರಾಮದ ಶಿವಪ್ಪ ಗುರೇನ್ ಎಂಬುವರ ಜಮೀನಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಮಲೆನಾಡು ಸಿರಿ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ರೈತರೊಂದಿಗೆ ನಾಟಿ ಸಂಭ್ರಮ ಹಾಗೂ ಚಂದ್ರಯಾನ-3ರ ಯಶಸ್ವಿಗೆ ಸಂಭ್ರಮಾಚರಣೆ ಯಲ್ಲಿ ಅವರು ಮಾತನಾಡಿದರು. ರೈತರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳು, ಬೆಳೆಗಳಿಗೆ ರೋಗ ತಗುಲದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅಧಿಕ ಇಳುವರಿ ಪಡೆಯಲು ಇರುವ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಮಾತನಾಡಿ, ದೇಶಕ್ಕೆ ರೈತರು ಮತ್ತು ಯೋಧರ ಕೊಡುಗೆ ಅಪಾರ. ರೈತರು ಯಾವುದೇ ಸಮಯದಲ್ಲಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದರು.
ಮಲೆನಾಡು ಸಿರಿ ಸೇವಾ ಟ್ರಸ್ಟ್ ಪ್ರಮುಖ ರಾಜು ಹಿರಿಯಾವಲಿ ಮಾತನಾಡಿ, ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ಚಂದ್ರಯಾನ-3 ಯಶಸ್ವಿಯಾಗಿದ್ದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದರು.
ಕೃಷಿ ಅಧಿಕಾರಿ ಸಂಜೀವ್, ರೈತ ಮಹಿಳೆಯರಾದ ನಾಗರತ್ನಾ, ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಹಿರೇಶಕುನ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಈರೇಶ್ ಮೇಸ್ತ್ರಿ, ಗ್ರಾಮದ ಪ್ರಮುಖರಾದ ರಾಮಪ್ಪ ಮಂಚಿ, ಹನುಮಂತಪ್ಪ, ಶಿವಪ್ಪ ಗುರೇನ್, ರೋಹಿತ್, ಸಂತೋಷ್ ನಡಹಳ್ಳಿ, ಚಿದಂಬರ ಹಿರೇಶಕುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net