ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ

tech
ಬಾಳೆಹೊನ್ನೂರಿನ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಪುಣ್ಯಪಾಲ್, ರಾಜೇಂದ್ರ, ಅರುಣೇಂದ್ರಗೌಡ, ಸುರೇಂದ್ರ, ರಾಘವೇಂದ್ರ, ಗೋಪಾಲ್ ಇತರರಿದ್ದರು.
Published on

ಬಾಳೆಹೊನ್ನೂರು: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ ಎಂದು ಯುವ ವಾಗ್ಮಿ ಕೊಪ್ಪದ ಜೆ.ಪುಣ್ಯಪಾಲ್ ಹೇಳಿದರು.

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆ ಸೋಮವಾರ ಆಯೋಜಿಸಿದ್ದ ಸಮರ್ಪಣಾ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು ಬದುಕಿಗೆ ಮಾದರಿ. ಬದುಕಿನ ಶಿಕ್ಷಣವನ್ನೂ ಕಲಿಸುತ್ತಾರೆ. ಶಿಕ್ಷಕರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಜೆ.ಮೋಹನ್ ಮಾತನಾಡಿ, ಸೀನಿಯರ್ ಚೇಂಬರ್ ಸದಸ್ಯರು ಜೇಸಿ ಸಂಸ್ಥೆಯಿಂದ ರೂಪುಗೊಂಡವರು. ಜೇಸಿ ಸಂಸ್ಥೆಯಲ್ಲಿ ನಾಯಕತ್ವ ಬೆಳೆಸಿಕೊಂಡು ಸೀನಿಯರ್ ಘಟಕಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.
ಕಾಫಿ ಬೆಳೆಗಾರ ಕೆ.ಸಿ.ಅರುಣೇಂದ್ರಗೌಡ, ಸೀನಿಯರ್ ಚೇಂಬರ್ ಪರಿವಾರದ 18 ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.
ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ, ಸ್ಥಾಪಕ ಅಧ್ಯಕ್ಷ ಎ.ಆರ್.ಸುರೇಂದ್ರ, ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಖಜಾಂಚಿ ಎಚ್.ಗೋಪಾಲ್, ಕಾರ್ಯಕ್ರಮ ನಿರ್ದೇಶಕ ಸತೀಶ್ ಅರಳೀಕೊಪ್ಪ, ಚೈತನ್ಯ ವೆಂಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net