ತುರ್ತು ಸಮಯದಲ್ಲಿ ಉತ್ತಮ ಸೇವೆ

dayalisis
ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರಂಭವಾದ ಡಯಾಲಿಸಿಸ್ ಘಟಕವನ್ನು ಶಾಸಕ ಸುನೀಲ್‌ಕುಮಾರ್ ಉದ್ಘಾಟಿಸಿದರು.
Published on

ಹೆಬ್ರಿ: ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಆರಂಭವಾಗಿ ಸಾರ್ವಜನಿಕರಿಗೆ ಒಳಿತಾಗಿದೆ. ಡಯಾಲಿಸಿಸ್‌ಗಾಗಿ ಬಹುದೂರ ಕ್ರಮಿಸಬೇಕಾದ ಅವಶ್ಯಕತೆ ಇಲ್ಲ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಸಾಧ್ಯವಾದಲ್ಲಿ ಹೆಚ್ಚುವರಿ ಬೆಡ್ ಹಾಕಿ ಜನರಿಗೆ ಉತ್ತಮ ಸೇವೆ ನೀಡಿ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಪಂ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಗ್ರಾಪಂ ಹೆಬ್ರಿ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಹಾಗೂ ನೆಫ್ರೋ ಪ್ಲಸ್ ಸಹಯೋಗದೊಂದಿಗೆ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಘಟಕ ಉದ್ಘಾಟಿಸಿ ಮಾತನಾಡಿದರು.

ಟಿ.ಎಚ್.ಒ ಸಂದೀಪ್ ಕುಡ್ವ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ನಾಗರತ್ನ, ಇಒ ಶಶಿಧರ್ ಕೆ.ಜೆ., ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್, ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ್ ಬಂಗೇರ, ಹೆಬ್ರಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮೀನಾರಾಯಣ್ ನಾಯಕ್, ಬಿಜೆಪಿ ಪ್ರಮುಖರಾದ ರಮೇಶ್ ಪೂಜಾರಿ ಶಿವಪುರ, ಪ್ರಸನ್ನ ಶೆಟ್ಟಿ, ಶೋಭಾ ಶೆಟ್ಟಿ, ಸುಗಂಧಿ ನಾಯ್ಕ, ಸಮೃದ್ಧಿ ಪ್ರಕಾಶ್ ಶೆಟ್ಟಿ, ಸಂತೋಷ ಶೆಟ್ಟಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net