ನಿರಂತರ ರಕ್ತದಾನದಿಂದ ಉತ್ತಮ ಆರೋಗ್ಯ

Blood donate camp in savanur
Published on

ಸವಣೂರ: ರಕ್ತದಾನದ ಮಹತ್ವ ಅರಿತು ಗ್ರಾಮೀಣ ಪ್ರದೇಶದ ಯುವಜನತೆ ನಿರಂತರ ರಕ್ತದಾನ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಕೃಷ್ಣ ಸುಣಗಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ತಾಲೂಕಿನ ಸಿದ್ದಾಪುರ ಗ್ರಾಮದ ಶ್ರೀ ಗಜಾನನ ಗೆಳೆಯರ ಬಳಗದ ವತಿಯಿಂದ ಗ್ರಾಮದಲ್ಲಿ ಸೇವಾ ಪಾಕ್ಷಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಡಕೋಳ, ಹಿಮ್್ಸ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಪ್ರಥಮ ಬಾರಿಗೆ ಶುಕ್ರವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿರಂತರ ಒತ್ತಡದ ಮಧ್ಯೆ ಸಾಮಾಜಿಕ ಚಿಂತನೆಯೊಂದಿಗೆ ಪ್ರಧಾನಿ ಜನ್ಮದಿನವನ್ನು ರಕ್ತದಾನ ಮಾಡಿ ಆಚರಿಸಿರುವುದು ಶ್ಲಾಘನೀಯ ಎಂದರು.

ಹಾವೇರಿ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಮಾತನಾಡಿ, ರಕ್ತದಾನ ಮಾಡುವುದರಿಂದ ಶೇ. 80ರಷ್ಟು ಹೃದಯಾಘಾತ ಸಂಭವಿಸುವಿಕೆ ಕಡಿಮೆಯಾಗುತ್ತದೆ. ಒಬ್ಬ ಮನುಷ್ಯ ನೀಡಿದ 350 ಎಂಎಲ್ ರಕ್ತದಿಂದ ಮೂರು ಜೀವ ಉಳಿಸಬಹುದು. ರಕ್ತದಾನಿಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದರು.

ಡಾ. ರಾಜಶೇಖರ ಹಕ್ಕಿ ವಿಶ್ವ ರೇಬೀಸ್ ದಿನಾಚರಣೆ ಕುರಿತು ವಿವರಿಸಿದರು.

ಗಜಾನನ ಗೆಳೆಯರ ಬಳಗದ ಅಧ್ಯಕ್ಷ ಮುತ್ತಪ್ಪ ಉಳ್ಳಟ್ಟಿ ಅಧ್ಯಕ್ಷತೆ ವಹಿಸಿದ್ದರು. 17 ಜನರು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಬಿಜೆಪಿ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ ಗೌಳಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ಗ್ರಾಪಂ ಸದಸ್ಯರಾದ ವಿಶ್ವನಾಥ ಕೊಂಚಿಗೇರಿ, ಧರ್ಮಣ್ಣ ಜಿ., ಬಿಜೆಪಿ ಮುಖಂಡರಾದ ವೆಂಕಟೇಶ ನಾರಾಯಣಿ, ಸತೀಶ ಗೌಳಿ, ನಂಜುಂಡೇಶ ಕಳ್ಳೇರ, ಫಾರ್ವಸಿಸ್ಟ್ ಎಂ.ವೈ. ಪಟೇಲ್, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎ. ಅಕಳಂಡಸ್ವಾಮಿಮಠ, ಶಿವಕುಮಾರ ಕರಗುಪ್ಪಿ, ಮಹಾಂತೇಶ ಹೊಳೆಮ್ಮನವರ, ಮೌನೇಶ ಇಚ್ಚಂಗಿ, ವಿನಾಯಕ ದಾಮೋದರ, ವಿಜಯ ಉಳ್ಳಟ್ಟಿ, ಸಚಿನ್ ಕೋಳಿ ಇದ್ದರು. ಶರಣಪ್ಪ ಕಲ್ಲಪ್ಪನವರ, ಯಲ್ಲಪ್ಪ ಮಡಿವಾಳರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net