ಬೆಟ್ಟರಾಜು ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ

17M.D.R.11
Published on

ಮದ್ದೂರು: ತಾಲೂಕು ಮಡಿವಾಳ ಮಾಚಿದೇವರ ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ಬೆಟ್ಟರಾಜು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸಂಘದ ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಜಿಲ್ಲಾಧ್ಯಕ್ಷ ರವಿ ನೂತನ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.


ನೂತನ ಅಧ್ಯಕ್ಷ ಬೆಟ್ಟರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಗಮನಹರಿಸಿ ದುಡಿಯುತ್ತೇನೆ ಎಂದರು.


ಸಮುದಾಯದ ಜನರಿಗೆ ಅನುಕೂಲವಾಗಲು ಸಮುದಾಯ ಭವನದ ಅವಶ್ಯಕತೆ ಇದ್ದು ಹಾಗೂ ಮಡಿಕಟ್ಟೆಯನ್ನು ನಿರ್ಮಾಣ ಮಾಡಿಸಿಕೊಡುವಂತೆ ಶಾಸಕರ ಗಮನಕ್ಕೆ ತಂದು ಬೇಡಿಕೆ ಸಲ್ಲಿಸಲಾಗುವುದು ಎಂದರು.


ಮಡಿವಾಳ ಮಾಚಿದೇವರ ಸಂಘದ ಜಿಲ್ಲಾಧ್ಯಕ್ಷ ರವಿ, ಗೌರವ ಅಧ್ಯಕ್ಷ ಚನ್ನವೀರಯ್ಯ, ಉಪಾಧ್ಯಕ್ಷ ಬೆಟ್ಟಯ್ಯ, ಸದಸ್ಯರಾದ ಶ್ರೀನಿವಾಸ್, ಚನ್ನಪ್ಪ, ಗಿರಿಜಮ್ಮ, ರುದ್ರಪ್ಪ, ಗುರುರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net