ಬೆಟ್ಟದಹಳ್ಳಿ ಸರ್ಕಾರಿ ಶಾಲೆ ಜಾಲಾವೃತ

20 TKE 3(1)
Published on

ತರೀಕೆರೆ: ಪಟ್ಟಣ ಸುತ್ತಮುತ್ತಲ ಪ್ರದೇಶ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆ ಕೆಲವು ಕಡೆ ಅವಾಂತರ ಸೃಷ್ಟಿಸಿದೆ. ತಾಲೂಕಿನ ಬೆಟ್ಟದಹಳ್ಳಿ, ಕೋರನಹಳ್ಳಿ, ಚಟ್ಟನಹಳ್ಳಿ, ಕೆ.ಹೊಸೂರು ಇನ್ನಿತರ ಕಡೆ ಸೋಮವಾರ ರಾತ್ರಿ 8ಕ್ಕೆ ಗುಡುಗು, ಮಿಂಚು ಸಹಿತ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಸಮಯ ಸುರಿಯಿತು. ಬೆಟ್ಟದಹಳ್ಳಿ ಗ್ರಾಮದ ಬಸವನಕೆರೆ ಕೋಡಿ ಮೇಲೆ ಹರಿದ ನೀರು ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತಗ್ಗು ಪ್ರದೇಶಗಳಿಗೆ ನುಗ್ಗಿತ್ತು.
ದೋರನಾಳು ಗ್ರಾಮದ ಭೈರಾಪುರದಲ್ಲಿ ಹಾದು ಹೋಗಿರುವ ಬಾಗಲಕೋಟೆ-ಬಿಳಿಗಿರಿರಂಗನ ಬೆಟ್ಟ ರಾಜ್ಯಹೆದ್ದಾರಿ ಮೇಲೆ ನೀರು ಹರಿದು ಸಂಚಾರ ವ್ಯತ್ಯಯವಾಗಿತ್ತು. ಲಕ್ಕವಳ್ಳಿ ಕ್ರಾಸ್ ಮತ್ತಿತರ ಕಡೆ ಅಡಕೆ ತೋಟಗಳು ಜಲಾವೃತಗೊಂಡಿತ್ತು. ಅಮೃತಾಪುರ, ನೇರಲಕೆರೆ ಗ್ರಾಮ ಸೇರಿ ಗುಡ್ಡಗಾಡು ಪ್ರದೇಶದಿಂದ ಹರಿದು ಬಂದ ಭಾರಿ ಪ್ರಮಾಣದ ನೀರು ಕಟ್ಟೇಹೊಳೆ ಹಳ್ಳ ಧುಮ್ಮಿಕ್ಕಿ ಹರಿಯುವಂತೆ ಮಾಡಿದೆ. ನೀರಿನ ರಭಸಕ್ಕೆ ಬೃಹತ್ ಗಾತ್ರದ ಮರಗಳು ಕೊಚ್ಚಿಕೊಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net