ಲೋಕಾಯುಕ್ತ ಬಲೆಗೆ ಬೆಟ್ಟದಪುರ ಪಿಎಸ್‌ಐ

Published on

ಮೈಸೂರು: ಲಂಚ ಪ್ರಕರಣದಲ್ಲಿ ಬೆಟ್ಟದಪುರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಶಿವಶಂಕರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಜಪ್ತಿ ಮಾಡಿದ ಮೊಬೈಲ್ ವಾಪಸ್ ಕೊಡಲು ಹಾಗೂ ಕೊಲೆ ಯತ್ನ ಪ್ರಕರಣವೊಂದರಲ್ಲಿ ಒಬ್ಬರ ಪರ ಅನುಕೂಲ ಮಾಡಿಕೊಡುವ ಸಂಬಂಧ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಕುರಿತು ಹೈಕೋರ್ಟ್ ವಕೀಲರೊಬ್ಬರು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಅಶೋಕ್‌ಕುಮಾರ್, ರವಿಕುಮಾರ್ ಅವರು ಶುಕ್ರವಾರ ಸಂಜೆ ದಾಳಿ ನಡೆಸಿದಾಗ, ಠಾಣೆಯಲ್ಲಿ 80 ಸಾವಿರ ರೂ. ಸಬ್‌ಇನ್‌ಸ್ಪೆಕ್ಟರ್ ಮುಂದೆ ಇದ್ದಾಗ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net