ಮಹಿಳಾ ಸಂಘಟನೆಗಳ ನಿಯೋಗ ಭೇಟಿ

PTR_2 JUL_9
Published on

ಪುತ್ತೂರು: ಬಿಜೆಪಿ ಮುಖಂಡನ ಪುತ್ರನಿಂದ ವಂಚನೆಗೊಳಗಾದ ಪುತ್ತೂರಿನ ಸಂತ್ರಸ್ತೆಯ ಮನೆಗೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು.

ರಾಜಕೀಯ ಬೆಂಬಲದಿಂದ ತಲೆಮರೆಸಿಕೊಂಡಿರುವ ಶ್ರೀಕೃಷ್ಣ ಜೆ. ರಾವ್‌ನನ್ನು ತಕ್ಷಣ ಬಂಽಸಬೇಕು. ಗರ್ಭಪಾತಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ ಸಂಘಟನೆಗಳ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಮಹಿಳಾ ಮುಖಂಡರು ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲೆಯ ಜನಪರ ಮಹಿಳಾ ಸಂಘಟನೆಗಳನ್ನು ಜತೆ ಸೇರಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ದಲಿತ ಹಕ್ಕುಗಳ ಸಮಿತಿ ರಾಜ್ಯ ಸದಸ್ಯೆ ಈಶ್ವರಿ ಪದ್ಮುಂಜ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಜಯಂತಿ ಶೆಟ್ಟಿ, ಸಾಮರಸ್ಯ ವೇದಿಕೆ ಅಧ್ಯಕ್ಷೆ ಮಂಜುಳಾ ನಾಯಕ್, ವಕೀಲೆ ಶೈಲಜಾ ಅಮರನಾಥ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕಾವೂರು, ಅಸುಂತಾ ಡಿಸೋಜ, ಪ್ರಮೀಳಾ ದೇವಾಡಿಗ, ಪ್ಲೇವಿ ಕ್ರಾಸ್ತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net