

ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ವರ್ಗಿಸ್ ಕೈಪನಡುಕ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಂಚಾಲಕ ಜೈಸನ್ ಸಾಮುವೆಲ್, ಜಿ.ಪಂ. ವಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಶಿಕ್ಷಕ-ರಕ್ಷಕ ಸಂದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸಂಸ್ಥೆಯ ಹಳೇ ವಿದ್ಯಾರ್ಥಿ ನಿಸ್ಸಾರ್ ಭಾಗವಹಿಸಿದರು. ಆಲ್ಬಾ ಸ್ವಾಗತಿಸಿದರು. ಅಲ್ವಿನಾ ನಿರೂಪಿಸಿದರು. ರಿಸ್ಟನ್ ವಂದಿಸಿದರು.
ಸವಾರೋಪ ಸವಾರಂಭದಲ್ಲಿ ನೆಲ್ಯಾಡಿ ಗ್ರಾ. ಪಂ. ಅಧ್ಯಕ್ಷ ಸಲಾಂ ಬಿಲಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಪ್ರಾಂಶುಪಾಲ ವರ್ಗಿಸ್ ಕೈಪನಡುಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ವೆರೋನಿಕಾ, ದೀಪಾ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಅಲ್ಫೋನ್ಸಾ, ಸುಧಾಕರ್ ಹಾಗೂ ಮನೋಜ್ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಿತು.
ಸಾಧಕರಿಗೆ ಬಹುಮಾನ
ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್ ಆಗಿ ಪ್ರಾಥಮಿಕ ವಿಭಾಗದಿಂದ ಕೌಶಿಕ್ ಹಾಗೂ ಬಾಲಕಿಯರ ವಿಭಾಗದಿಂದ ವಂಶಿಲ್ ಮತ್ತು ನೂಹಾ, ಪ್ರೌಢಶಾಲಾ ಬಾಲಕರ ವಿಭಾಗದಿಂದ ಆದಿತ್ಯ ಬಾಲಕಿಯರ ವಿಭಾಗದಿಂದ ಪ್ರಿಯ, ಪಿಯುಸಿ ವಿಭಾಗದಿಂದ ವಿಕಾಸ್ ಮತ್ತು ಅಲೆನ್ ಶಿಜು ಬಾಲಕಿಯರ ವಿಭಾಗದಿಂದ ಜೆಸ್ಲಿ ವೈಯಕ್ತಿಕ ಚಾಂಪಿಯನ್ನಾಗಿ ಈ ಕ್ರೀಡಾಕೂಟದಿಂದ ಹೊರಹೊಮ್ಮಿದರು.