ಚಳ್ಳಕೆರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಶೇಂಗಾ ದಾಸ್ತಾನು

Betel nut, amount, peanut, stock,
Published on

ಚಳ್ಳಕೆರೆ: ಪ್ರಸಕ್ತ ಮುಂಗಾರು ಕೃಷಿ ಶೇಂಗಾ ಬಿತ್ತನೆ ಕಾರ್ಯಕ್ಕೆ ಬೇಕಾಗುವ ಶೇಂಗಾಬೀಜವನ್ನು ಮುಂಜಾಗ್ರತೆಯಾಗಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ಅಶೋಕ್ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ಬುಧವಾರ ಶೇಂಗಾ ದಾಸ್ತಾನು ಘಟಕದಲ್ಲಿ ರೈತರಿಗೆ ಬಿತ್ತನೆ ಶೇಂಗಾ ವಿತರಿಸಿ ಮಾತನಾಡಿದರು.

ತಾಲೂಕಿನ ನಾಯಕನಹಟ್ಟಿ, ತಳಕು, ಪರಶುರಾಂಪುರ ಹೋಬಳಿ ಕೇಂದ್ರಗಳು ಮತ್ತು ಕಸಬಾದಲ್ಲಿ ಶೇಂಗಾ ದಾಸ್ತಾನು ಮಾಡಲಾಗಿದೆ. ಈಗಾಗಲೇ ನಾಯಕನಹಟ್ಟಿ ಮತ್ತು ತಳಕು ಹೋಬಳಿ ಕೇಂದ್ರದಲ್ಲಿ ಎರಡು ದಿನಗಳಿಂದ ವಿತರಣೆ ಮಾಡಲಾಗಿದೆ ಎಂದರು.

ಮುಂಗಾರು ಮಳೆ ವಿಳಂಬವಾಗಿರುವ ಕಾರಣ, ಕೃಷಿ ಚಟುವಟಿಕೆ ಮತ್ತು ಶೇಂಗಾ ಖರೀದಿಯಲ್ಲಿ ರೈತರು ಆಸಕ್ತಿ ತೋರುತ್ತಿಲ್ಲ. ಆದರೂ, ಬಿತ್ತನೆ ಕಾರ್ಯಕ್ಕೆ ಬೇಕಾಗುವಷ್ಟು ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ.

ಒಬ್ಬ ರೈತರಿಗೆ 30 ಕೆಜಿಯ 5 ಪಾಕೆಟ್ ವಿತರಿಸುವ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net