

ಲಕ್ಷ್ಮೇಶ್ವರ: ವೀಳ್ಳೆದೆಲೆಗೆ ಕೀಟಬಾಧೆ, ರೋಗಬಾಧೆ ಉಂಟಾಗುತ್ತಿದ್ದು, ರಾಮಗೇರಿ ವ್ಯಾಪ್ತಿಯ ಬಸವರಾಜ ಹೊಗೆಸೊಪ್ಪಿನ ಅವರ ವೀಳ್ಯದೆಲೆ ತೋಟಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಭೇಟಿ ನೀಡಿ ರೋಗ ನಿರ್ವಹಣೆ ಕುರಿತು ಸಲಹೆ ನೀಡಿದರು.
ತಾಲೂಕಿನಲ್ಲಿ ಅಂದಾಜು 50 ಎಕರೆಗಿಂತ ಹೆಚ್ಚಿನ ಕ್ಷೇತ್ರದಲ್ಲಿ ವೀಳ್ಯದೆಲೆ ಬೆಳೆಯಲಾಗಿದ್ದು, ಕೀಟ, ರೋಗಬಾಧೆಯಿಂದ ಇಳುವರಿಯಲ್ಲಿ ಕುಂಠಿತ ಕಂಡುಬರುತ್ತದೆ. ರೈತರು ಉತ್ಕೃಷ್ಟ ಗುಣಮಟ್ಟದ ಇಳುವರಿ ಪಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ನಾಟಿ ಮಾಡುವ ಸಂದರ್ಭದಲ್ಲಿ ಹಾಗೂ ನಾಟಿ ಮಾಡಿದ ನಂತರ 6 ತಿಂಗಳಿಗೊಮ್ಮೆ ಉತ್ತಮ ಕೊಟ್ಟಿಗೆ ಗೊಬ್ಬರದ ಜತೆಗೆ ಅಣುಜೀವಿ ಗೊಬ್ಬರಗಳಾದ ಟ್ರೈಕೋಡರ್ಮಾ, ಅಜೋಸ್ಟ್ರಿಲಂ ಅಜುಟೋಬ್ಯಾಕ್ಸರ್, ಸುಡೋಮೊನಾಸ್ ಮುಂತಾದವುಗಳಿಂದ ಉಪಚರಿಸಬೇಕು. ಇನ್ನಿತರ ಔಷಧೋಪಚಾರಗಳ ಬಗ್ಗೆ ಅವರು ಮಾಹಿತಿ ನೀಡಿದರು.