ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಬೇಟೆಗಾರರ ಬಂಧನ

18ank news and photos 04
Published on

ಆನೇಕಲ್: ಇಂಡ್ಲವಾಡಿ ಹೊಸಕೆರೆ ಸಮೀಪ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆನೇಕಲ್ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಮೈಲಸಂದ್ರ ನಿವಾಸಿಗಳಾದ ಬಾಲರಾಜು (41) ಹಾಗೂ ವ್ನಿೇಷಪ್ಪ (63) ಬಂಧಿತರು. ಇಂಡ್ಲವಾಡಿ ಗ್ರಾಮದ ಹೊಸಕೆರೆ ಬಳಿಯ ನೀಲಗಿರಿ ತೋಪಿನಲ್ಲಿ ಬಲೆ ಹಾಕಿ ಪ್ರಾಣಿಗಳ ಬೇಟೆಗೆ ಹೊಂಚುಹಾಕಿ ಕುಳಿತ್ತಿದ್ದರು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net