ಬೆಟಗೇರಿ ದುರ್ಗಾದೇವಿ ರಥೋತ್ಸವ ಇಂದು

ಅಳವಂಡಿ ಸಮೀಪದ ಬೆಟಗೇರಿಯ ದುರ್ಗಾದೇವಿ ದೇವಸ್ಥಾನದ ಹೊರನೋಟ.
ಅಳವಂಡಿ ಸಮೀಪದ ಬೆಟಗೇರಿಯ ದುರ್ಗಾದೇವಿ ದೇವಸ್ಥಾನದ ಹೊರನೋಟ.
Published on

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೋತ್ಸವ ಮಾ.24ರಂದು ಆರಂಭವಾಗಿದ್ದು, 28ರವರೆಗೆ ಜರುಗಲಿದೆ. ಸೋಮವಾರ ಕಂಕಣಧಾರಣೆ, ಲಘುರಥೋತ್ಸವ, ಮಂಗಳವಾರ ಪಾಯಸ ಹಾಗೂ ಅಗ್ನಿಹಾಯುವ ಕಾರ್ಯಕ್ರಮ ನಡೆಯಿತು.

ಮಾ.26ರಂದು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ, ಹೂವಿನಹಡಗಲಿಯ ಡಾ.ಹಿರಿಶಾಂತವೀರ ಸ್ವಾಮೀಜಿ, ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧ್ವಜಾರೋಹಣ, ಮಹಾ ರಥೋತ್ಸವ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.

ಮಾ.27ರಂದು ಕಡುಬಿನ ಕಾಳಗ, ಮದ್ದು ಸುಡುವ ಕಾರ್ಯಕ್ರಮ, ಅನ್ನ ಸಂತರ್ಪಣೆ, ಭಕ್ತಿ ಹಿತಚಿಂತನಾ ಸಭೆ ನಡೆಯಲಿದೆ. ಗಿಣಿಗೇರಿಯ ಆನೆಗೊಂದಿ ಸಂಸ್ಥಾನ ಸರಸ್ವತಿ ಪೀಠದ ಅಭಿನವ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಾಸ್ಯ ಕಲಾವಿದ ವೈಶಂಪಾಯನ ಅವರಿಂದ ಹಾಸ್ಯ ಸಂಜೆ, ಮೆಹಬೂಬ ಕಿಲ್ಲೇದಾರ ಅವರಿಂದ ಜಾನಪದ ಕಾರ್ಯಕ್ರಮ, ನಾಟಕ, ಬಯಲಾಟ ಪ್ರದರ್ಶನ ನಡೆಯಲಿದೆ.

ಮಾ.28ರಂದು ನೈಸರ್ಗಿಕ ಕೃಷಿ ಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ. ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಕೃಷಿ ತಜ್ಞರಾದ ಮಲ್ಲೇಶಪ್ಪ ಬಿಸಿರೊಟ್ಟಿ, ಡಾ.ಬಸವರಾಜ ನಾವಿ ಮಾಹಿತಿ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net