ಮೈಸೂರು ವಿವಿಗೆ ಅತ್ಯುತ್ತಮ ವಿಶ್ವವಿದ್ಯಾಲಯ ಪ್ರಶಸ್ತಿ

dr m.b.suresh
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ 2021-22ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ‘ರಾಜ್ಯ ಮಟ್ಟದ ಅತ್ಯುತ್ತಮ ವಿಶ್ವವಿದ್ಯಾಲಯ’ ಪ್ರಶಸ್ತಿ ಹಾಗೂ ಮೈಸೂರು ವಿ.ವಿ. ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ಸುರೇಶ್ ಅವರಿಗೆ ‘ಅತ್ಯುತ್ತಮ ಕಾರ್ಯಕ್ರಮ ಸಂಯೋಜನಾಧಿಕಾರಿ’ ಪ್ರಶಸ್ತಿ ದೊರೆತಿದೆ.


ಅಂತೆಯೆ, ಮದ್ದೂರು ಸರ್ಕಾರಿ ಮಹಿಳಾ ಕಾಲೇಜಿನ ಡಾ.ಜಿ.ಆರ್. ನಮ್ರತಾ ಅವರಿಗೆ ‘ಅತ್ಯುತ್ತಮ ಕಾರ್ಯಕ್ರಮಾಧಿಕಾರಿ’ ಪ್ರಶಸ್ತಿ, ಹುಣಸೂರಿನ ಸಾಧನಪುರದ ಪ್ರಮೋದ್ ಅವರಿಗೆ ‘ಅತ್ಯುತ್ತಮ ಸ್ವಯಂ ಸೇವಕ’ ಪ್ರಶಸ್ತಿ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ(ಸ್ವಾಯತ್ತ) ಡಿ.ಪಿ.ಸುಶ್ಮಿತಾ ಅವರಿಗೆ ‘ಅತ್ಯುತ್ತಮ ಸ್ವಯಂ ಸೇವಕಿ’ ಪ್ರಶಸ್ತಿ ಲಭಿಸಿದೆ.


ಅ. 11ರಂದು ಬೆಂಗಳೂರಿನ ರಾಜಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಮೈಸೂರು ವಿಶ್ವವಿದ್ಯಾಲಯದಲ್ಲಿ 1969ರಿಂದ ರಾಷ್ಟ್ರೀಯ ಸೇವಾ ಯೋಜನೆ ಅಸ್ತಿತ್ವದಲ್ಲಿದ್ದು, ಹಲವಾರು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ಸರ್ಕಾರ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net