ರಂಜಿತ್ ಎಚ್.ಡಿ.ಗೆ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

jci
Published on

ಬೆಳ್ತಂಗಡಿ: ಕಾಪುವಿನಲ್ಲಿ ನಡೆದ 2024ನೇ ಸಾಲಿನ ವಲಯ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಎಚ್.ಡಿ. ಬಳಂಜ ಜೆಸಿಐ ಭಾರತದ ಪ್ರತಿಷ್ಠಿತ ವಲಯ ಹದಿನೈದರ 2024ನೇ ಸಾಲಿನ ಅತ್ಯುತಮ ಘಟಕಾಧ್ಯಕ್ಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 47ನೇ ಘಟಕಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಪ್ರಸ್ತಕ ವರ್ಷದಲ್ಲಿ ಹಲವಾರು ತರಬೇತಿ, ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ತಾಲೂಕು ಹಾಗೂ ಜೆಸಿಐಯ ವಲಯ 15ರಲ್ಲಿ ಜೆಸಿಐ ಬೆಳ್ತಂಗಡಿಯನ್ನು ಮಿಂಚುವಂತೆ ಮಾಡಿದ್ದರು.

ವಲಯ 15ರ ವಲಯಾಧ್ಯಕ್ಷ, ವಕೀಲ ಗಿರೀಶ್ ಎಸ್.ಪಿ. ಪ್ರಶಸ್ತಿ ನೀಡಿ ಗೌರವಿಸಿದರು. ಪೂರ್ವ ವಲಯಾಧ್ಯಕ್ಷ ಸಂಪತ್ ಬಿ.ಸುವರ್ಣ, ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ವಲಯ ಉಪಾಧ್ಯಕ್ಷ ಶಂಕರ್ ರಾವ್, ಬೆಳ್ತಂಗಡಿ ಘಟಕದ ಪೂರ್ವಾಧ್ಯಕ್ಷರಾದ ಚಿದಾನಂದ ಇಡ್ಯಾ, ಪ್ರಶಾಂತ್ ಲೈಲಾ, ಅಭಿನಂದನ್ ಹರೀಶ್ ಕುಮಾರ್, ಪ್ರಸಾದ್ ಬಿ.ಎಸ್., ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಆಶಾ ಪ್ರಶಾಂತ್, ಚಂದ್ರಹಾಸ್ ಬಳಂಜ, ಶೈಲೇಶ್, ಲೇಡಿ ಜೆಸಿ ಸಂಯೋಜಕ ಶ್ರುತಿ ರಂಜಿತ್, ಕಾರ್ಯದರ್ಶಿ ಅನುದೀಪ್ ಜೈನ, ಜೆಜೆಸಿ ಅಧ್ಯಕ್ಷ ಸಮನ್ವಿತ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net