

ವಿಜಯಪುರ: ಕನ್ನಡ ಚಿತ್ರರಂಗದ ಸಿನಿಮಾ ಪತ್ರಿಕೆ ಚಿತ್ರ ಸಂತೆ ಪತ್ರಿಕೆ ವತಿಯಿಂದ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವದಲ್ಲಿ ವಿಜಯಪುರದ ನಟ, ನಿರ್ದೇಶಕ ವಿಶ್ವಪ್ರಕಾಶ ಮಲಗೊಂಡ ನಟಿಸಿ ನಿರ್ದೇಶಿಸಿದ ತುಷಾರ್ ಟೆಲಿ ಫಿಲ್ಮ್ಗೆ ಬೆಸ್ಟ್ ಕನ್ನಡ ಟೆಲಿ ಫಿಲ್ಮ್ ಅವಾರ್ಡ್ ಲಭಿಸಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವಪ್ರಕಾಶ ಮಲಗೊಂಡ ಅವರಿಗೆ ಪಡ್ಡೆಹುಲಿ ಸಿನಿಮಾ ನಟ ಶ್ರೇಯಸ್ ಮಂಜು ಹಾಗೂ ಚಿತ್ರ ಸಂತೆ ಸಂಪಾದಕ ಗಿರೀಶ ಗೌಡ ಪ್ರಶಸ್ತಿ ಪ್ರದಾನ ಮಾಡಿದರು.
ನಿರ್ಮಾಪಕ ಗಂಡುಗಲಿ ಮಂಜು, ನಟಿ ಅಂಬಾಲಿ ಭಾರತಿ, ಪ್ರಾ ಫೌಂಡೇಷನ್ ಅಧ್ಯ ಡಾ. ಮಹೇಶ ಅರವಿಂದ, ನಟಿ ನಂದಿನಿ ರಾಮಯ್ಯ ವೇದಿಕೆಯಲ್ಲಿದ್ದರು.