

ಹುಬ್ಬಳ್ಳಿ: ಇಲ್ಲಿಯ ಎಸ್ಜೆಎಂವಿ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಶನಿವಾರ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಡಾ. ಜ್ಯೋತಿಲಕ್ಷ್ಮಿ ಡಿ.ಪಿ., ಡಾ. ಸುನೀತಾ ರಾಣಿ ಪಿ., ಡಾ. ಸವಿತಾ ಅರಳೇಲಿಮಠ ಹಾಗೂ ಸಿ.ಆರ್. ಹಿರೇಮಠ ಅವರಿಗೆ ಮೂರುಸಾವಿರ ಮಠ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕಾಲೇಜಿನ ಹಳೇ ವಿದ್ಯಾರ್ಥಿ, ಆರೋಗ್ಯ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಸದಾಶಿವ ಕುರ್ತಕೋಟಿ, ಸಂಘದ ನಿರ್ದೇಶಕ ಶಶಿ ಸಾಲಿ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಚೇರ್ಮನ್ ಅರವಿಂದ ಕುಬಸದ ಮಾತನಾಡಿ, ಎಲ್ಲ ಶಿಕ್ಷಕರು ವೃತ್ತಿಯಲ್ಲಿ ಹೆಚ್ಚಿನ ಆಸಕ್ತಿಯೊಂದಿಗೆ ಕೆಲಸ ನಿರ್ವಹಿಸಬೇಕು ಎಂದರು. ಡಾ. ದಾಕ್ಷಾಯಿಣಿ ಗೊಬ್ಬರಗುಂಪಿ ಸ್ವಾಗತಿಸಿದರು. ಶಿವಲೀಲಾ ವಿ. ಪರಿಚಯಿಸಿದರು. ಡಾ. ಸುಪ್ರಿಯಾ ಮಾಲಶೆಟ್ಟಿ ನಿರೂಪಿಸಿದರು. ಡಾ. ಜೆ.ಬಿ. ಭದ್ರಾಪೂರ ವಂದಿಸಿದರು.