29 ಜನರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ: ನಗರದಲ್ಲಿ ಪ್ರದಾನ ಸಮಾರಂಭ

Award
Published on

ಮಂಡ್ಯ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 29 ಜನರನ್ನು ಆಯ್ಕೆ ಮಾಡಲಾಗಿದೆ. ಇವರಿಗೆಲ್ಲ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪ್ರದಾನ ಮಾಡಲಾಯಿತು.
ಕಿರಿಯ ಪ್ರಾಥಮಿಕ ವಿಭಾಗದಿಂದ ಕೆ.ಆರ್.ಪೇಟೆ ತಾಲೂಕು ಸರ್ಕಾರಿ ಶಾಲೆಯ ಅರೆಬೊಪ್ಪನಹಳ್ಳಿಯ ಕೆ.ಎಚ್.ಕೃಷ್ಣೇಗೌಡ, ರಾಮನಹಳ್ಳಿಯ ಎಸ್.ಎಂ.ಶಿವಕುಮಾರ್, ಮದ್ದೂರು ತಾಲೂಕು ಮಾದನಾಯಕನಹಳ್ಳಿಯ ಎನ್.ಕುಮಾರ, ಮಳವಳ್ಳಿ ತಾಲೂಕು ಚೆನ್ನೇಗೌಡನದೊಡ್ಡಿಯ ಎಸ್.ಯಶೋದಮ್ಮ, ಮಂಡ್ಯ ಉತ್ತರವಲಯದ ಹುಲಿಕೆರೆಕೊಪ್ಪಲಿನ ಸಿ.ಪಿ.ನಾಗರಾಜಾಚಾರ್, ದಕ್ಷಿಣ ವಲಯದ ಹುಲ್ಲುಕೆರೆಕೊಪ್ಪಲಿನ ಎಸ್.ಪಾಪಣ್ಣ, ನಾಗಮಂಗಲ ತಾಲೂಕು ಎಂ.ಹೊಸೂರಿನ ಸಿ.ವಿ.ಜಯರಾಮು, ಪಾಂಡವಪುರ ತಾಲೂಕು ಶಂಭೂನಹಳ್ಳಿಯ ಇ.ವಿ.ಆಶಾ, ಎಸ್.ಕೊಡಹಳ್ಳಿಯ ಕೆ.ಸದಾನಂದ ಮತ್ತು ಶ್ರೀರಂಗಪಟ್ಟಣ ತಾಲೂಕು ಬೆಟ್ಟಹಳ್ಳಿಯ ಎನ್.ಮಹೇಶ್ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಕೆ.ಆರ್.ಪೇಟೆ ಪಟ್ಟಣದ ಬಿ.ಎನ್.ಮಹೇಶ್, ಮದ್ದೂರು ತಾಲೂಕು ಕದಲೂರಿನ ಜೋಗಿಗೌಡ, ಮಳವಳ್ಳಿ ತಾಲೂಕು ಶಿವನಸಮುದ್ರದ ಪಿ.ಸೋಮಶೇಖರ್, ಮಂಡ್ಯ ಉತ್ತರ ವಲಯ ಹನಗನಹಳ್ಳಿಯ ಚಲುವರಾಜು ಮತ್ತು ಚಂದಗಾಲಿನ ಆರ್.ಪ್ರಕಾಶ್, ದಕ್ಷಿಣ ವಲಯದ ಹಳೇನಗರದ ಉಮೇಶ, ನಾಗಮಂಗಲ ತಾಲೂಕು ತೂಬಿನಕೆರೆಯ ಚನ್ನಬಸವ, ಪಾಂಡವಪುರ ತಾಲೂಕು ಶಿಂಡಭೋಗನಹಳ್ಳಿಯ ಪುಟ್ಟಲಕ್ಷ್ಮಮ್ಮ, ಶ್ರೀರಂಗಪಟ್ಟಣ ತಾಲೂಕು ಬಸ್ತಿಪುರದ ಸೈಯದ್ ಖಾನ್‌ಗೆ ಪ್ರಶಸ್ತಿ ಬಂದಿದೆ.
ಪ್ರೌಢಶಾಲಾ ವಿಭಾಗದಿಂದ ಕೆ.ಆರ್.ಪೇಟೆ ತಾಲೂಕು ಆಲೇನಹಳ್ಳಿಯ ಕೆ.ಎನ್.ರಂಗನಾಥ್, ಮದ್ದೂರು ತಾಲೂಕು ಕ್ಯಾತಘಟ್ಟದ ವೈ.ಎಸ್.ಬಸವರಾಜು, ಮಳವಳ್ಳಿ ತಾಲೂಕು ಮಾರಗೌಡನಹಳ್ಳಿಯ ಮಲ್ಲೇಶ ಚನ್ನಬಸಪ್ಪ ಮಲಕಗೋಣ, ಮಂಡ್ಯ ಉತ್ತರ ವಲಯ ಬಿ.ಹೊಸೂರಿನ ಎಂ.ಮಾದೇಶ, ದಕ್ಷಿಣ ವಲಯ ಸಂತೆಕಸಲಗೆರೆಯ ಡಿ.ಕೆ.ರಾಮಯ್ಯ ಮತ್ತು ಬೇಲೂರಿನ ಉಷಾರಾಣಿ, ನಾಗಮಂಗಲ ತಾಲೂಕು ಹರದನಹಳ್ಳಿಯ ಚಿಕ್ಕಬೋರಯ್ಯ, ಪಾಂಡವಪುರ ಪಟ್ಟಣ ಶಾಂತಿನಗರದ ಆರ್.ಜಿ.ಸರಿತಾ, ಶ್ರೀರಂಗಪಟ್ಟಣ ತಾಲೂಕು ಗಂಜಾಂನ ಟಿ.ವಿ.ಸುಂದರೇಶ್‌ಮೂರ್ತಿ, ಮಳವಳ್ಳಿ ಪಟ್ಟಣದ ಎಚ್.ಸಿ.ಶಿವಮಾದಯ್ಯ ಪ್ರಶಸ್ತಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net