

ತುಮಕೂರು: ನೊಬೆಲ್ ಪ್ರಶಸ್ತಿ ಪುರಸತೆ ಮದರ್ ತೆರೇಸಾ ರಾಷ್ಟೀಯ ಸಂಸ್ಥೆ ಕೊಡಮಾಡುವ ಶ್ರೇಷ್ಠ ಸಮಾಜ ಸುಧಾರ ಪ್ರಶಸ್ತಿಗೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜೀ ಭಾಜನರಾಗಿದ್ದಾರೆ.
ಆ.26ರಂದು ಬೆಳಗ್ಗೆ 10.30ಕ್ಕೆ ಚೆನ್ನೆನ ತೇನ್ಯಂಪೇಟ್ ಕಾಮರಾಜ್ ಭವನದಲ್ಲಿ ಮದರ್ ತೆರೇಸಾ ಅವರ 114ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ, ಪಾಂಡಿಚೇರಿ ಸಿಎಂ ಆರ್.ರಂಗಸ್ವಾಮಿ, ತವಿಳುನಾಡು ವಿಧಾನಸಭಾ ಸಭಾಪತಿ ಅಪ್ಪಾವು ಮತ್ತಿತರರು ಉಪಸ್ಥಿತರಿರುವರು.
ಅವಿಶ್ರಾಂತ ಸಮಾಜಸೇವೆ: ಕಳೆದ 40 ವರ್ಷಗಳಿಂದ ಶ್ರೀ ರಾಮಕೃಷ್ಣ ಮಠದ ಸಂನ್ಯಾಸಿಯಾಗಿ ತನ್ನ ಜೀವನವನ್ನೇ ಸ್ವಾಮಿ ವಿವೇನಕಾನಂದರ ಆದರ್ಶಗಳ ಅನುಷ್ಠಾನ ರೂಪಕ್ಕೆ ತರಲು ಅಹರ್ನಿಷಿ ದುಡಿಯುತ್ತಿರುವ ಸ್ವಾಮಿ ಜಪಾನಂದ ಜೀ ಅವರು ಪ್ರಕೃತಿ ವಿಕೋಪಗಳು ಬಂದಾಗಲೆಲ್ಲಾ ರಾಜ್ಯದ ಗಡಿದಾಟಿ ಸೇವೆಗೆ ಧಾವಿಸಿ ಸಹಾಯಹಸ್ತವನ್ನು ನೀಡುತ್ತಾ ಪರಿಹಾರ ಕಾರ್ಯಗಳನ್ನು ಕೃಗೊಂಡು ಸಹಸ್ರ ಸಹಸ್ರ ಜನರಿಗೆ ಬಂಧುವಾಗಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಭಗವಂತನನ್ನು ಕಾಣುವ ನಿಷ್ಕಲ್ಮಷ ಹೃದಯದಿಂದ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಜಪಾನಂದರಿಗೆ ದೊರೆತ ಮಹತ್ತರವಾದ ಪ್ರಶಸ್ತಿ ಇದಾಗಿದೆ.