ಎಸ್‌ವಿಇಐ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

Published on

ಮೈಸೂರು: ವಿಜಯನಗರ (ಬೆಳವಾಡಿ)ದಲ್ಲಿರುವ ಎಸ್‌ವಿಇಐ ಸಂಯುಕ್ತ ಪದವಿ ಪೂರ್ವ ಕಾಲೇಜು ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಶೇಕಡ ನೂರರಷ್ಟು ಸಾಧನೆ ಮಾಡಿದ್ದು, ಶೇ.96 ವಿದ್ಯಾರ್ಥಿಗಳು ಅತ್ಯುತ್ತಮ ದರ್ಜೆಯಲ್ಲಿ, ಶೇ.60ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.99 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಶೇ.94ರಷ್ಟು ಅತ್ಯುತ್ತಮ ದರ್ಜೆ, ಶೇ.59 ಪ್ರಥಮ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ.
ವಿಜ್ಞಾನ ವಿಭಾದಲ್ಲಿ ಅಮೂಲ್ಯ ಭಟ್ (ಶೇ.97), ಎಚ್.ಎಂ.ಕೀರ್ತನಾ (ಶೇ.94), ಸಿ.ಎನ್.ಸಂಜನಾ (ಶೇ.93), ವಾಣಿಜ್ಯ ವಿಭಾಗದಲ್ಲಿ ವೈ.ಎಸ್.ಹೇಮಲತಾ (ಶೇ.95), ಛಾಯಾ (ಶೇ.92) ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮರಾಗಿದ್ದಾರೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net