ಜೆಎಸ್‌ಎಸ್ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ

Puc Exam
Published on

ಮೈಸೂರು: ನಗರದ ಬಿ.ಎನ್.ರಸ್ತೆಯ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಕಾಲೇಜಿನ 15 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಥಮ ದರ್ಜೆಯಲ್ಲಿ 123, ದ್ವಿತೀಯ ದರ್ಜೆಯಲ್ಲಿ 85 ಹಾಗೂ ತೃತೀಯ ದರ್ಜೆಯಲ್ಲಿ 60 ವಿದ್ಯಾರ್ಥಿಗಳು ಉತ್ತೀರಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 90 ವಿದ್ಯಾರ್ಥಿಗಳ ಪೈಕಿ 75 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 142 ವಿದ್ಯಾರ್ಥಿಗಳ ಪೈಕಿ 65 ವಿದ್ಯಾರ್ಥಿಗಳು ಉತ್ತೀರಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲಯೀಕ್ ಅಹ್ಮದ್ 567, ಟಿ.ಮಹೇಶ 559, ಆನಂದ 550, ರುಶಾಂಕ್ 540 ಅಂಕಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಗೌಡಡ ರಿತು ಎನ್. 549, ಸುಚಿತ್ರಾ 538, ವಿಜಯಲಕ್ಷ್ಮೀ 535, ಬಿ.ಸಂಜಯ್ 535, ಮಹಾ ಅರುಣ್ 521, ಜೀವಿತ 515 ಹಾಗೂ ಕಲಾ ವಿಭಾಗದಲ್ಲಿ ಅಶ್ವಿನಿ 545, ಸುದೀಪ ತಲವಾರ್ 532, ಶೋಭ 528, ಮಹದೇವಮ್ಮ 521 ಹಾಗೂ ಶ್ರವಣ್ ಕುಮಾರ್ 516 ಅಂಕಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net