

ವಿಜಯಪುರ: ಇಲ್ಲಿನ ಇಟ್ಟಂಗಿಹಾಳದಲ್ಲಿ ಈಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವೇದ ಅಕಾಡೆಮಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ವಿಭಾಗದಿಂದ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಕುಮಾರಿ ವೈಷ್ಣವಿ ಮೋರೆ (ಪ್ರಥಮ), ಅರೇಬಿಕ್ ಪಠಣದಲ್ಲಿ ಆರ್ಷಾನ್ ಶೇಖ (ಪ್ರಥಮ), ಲಘು ಸಂಗೀತದಲ್ಲಿ ಕುಮಾರಿ ಪ್ರಾರ್ಥನಾ ಎಸ್ (ಪ್ರಥಮ), ಛದ್ಮ ವೇಷದಲ್ಲಿ ಸಾನ್ವಿ ಮಾನಕರ (ಪ್ರಥಮ), ಕಥೆ ಹೇಳುವುದು - ಖುಷಿ ಕುಬಸದ (ಪ್ರಥಮ), ಚಿತ್ರಕಲೆ ಮತ್ತು ಬಣ್ಣ ಹಚ್ಚುವುದು-ಐಶ್ವರ್ಯಾ ಡೊಣಗಿ (ಪ್ರಥಮ), ಕ್ಲೇ ಮಾಡೆಲಿಂಗ್ - ಸನ್ನಿಧಿ ಉಮಾಗೋಳ (ಪ್ರಥಮ), ಭಕ್ತಿಗೀತೆ - ಹೃತ್ವಿಕ್ ಪಾಟೀಲ (ಪ್ರಥಮ), ಆಶುಭಾಷಣ - ಸೃಷ್ಟಿ ಬಿರಾದಾರ (ಪ್ರಥಮ), ಧಾರ್ಮಿಕ ಪಠಣ - ಸರ್ವೇಶ ಹುದ್ದಾರ ಮತ್ತು ಶಾಹಿದ್ (ಪ್ರಥಮ), ಕಂಠಪಾಠ (ಕನ್ನಡ) (ಪ್ರಥಮ), ಮನಸ್ವಿ, ಕಂಠಪಾಠ (ಇಂಗ್ಲೀಷ್) - ಸುಮಾ ಹಂದ್ರಾಳ (ಪ್ರಥಮ), ಅಭಿನಯ ಗೀತೆ - ಐಶ್ವರ್ಯಾ ಡೊಣಗಿ (ದ್ವಿತೀಯ), ಭಾಷಣ- ಖುಷಿ ಚೆಟ್ಟರ್ (ದ್ವಿತೀಯ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಪ್ರೌಢಶಾಲಾ ವಿಭಾಗದಿಂದ ಜಾನಪದ ಗೀತೆ-ಶಾವರ ಸಿದ್ಧ ಪೂಜಾರಿ (ದ್ವಿತೀಯ), ಚಿತ್ರಕಲೆ- ವಿವೇಕ ಬಿರಾದಾರ (ದ್ವಿತೀಯ), ಹಾಸ್ಯ - ಪ್ರಜ್ವಲ್ ಪಾಟೀಲ (ದ್ವಿತೀಯ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಮಕ್ಕಳ ಸಾಧನೆಗೆ ವೇದ ಅಕಾಡೆಮಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಕೆಲೂರ, ಉಪಾಧ್ಯಕ್ಷ ದಯಾನಂದ ಕೆಲೂರ, ಕಾರ್ಯದರ್ಶಿ ಎನ್.ಜಿ.ಯರನಾಳ, ನಿರ್ದೇಶಕಿ ಜ್ಯೋತಿ ದೇಸಾಯಿ, ಮುಖ್ಯಶಿಕ್ಷಕರಾದ ಮಂಜುನಾಥ ಎಂ.ಎಂ, ರಶ್ಮಿ ಕವಟಗಿಮಠ, ಸುರೇಶ ಜತ್ತಿ ಹಾಗೂ ಶಿಕ್ಷಕ-ಶಿಕ್ಷಕಿಯರು ಹರ್ಷ ವ್ಯಕ್ತಪಡಿಸಿದ್ದಾರೆ.