ಉತ್ತಮವಾದ ಜೀವನ ಶೈಲಿ ಪಾಲನೆಯಿಂದ ಕೂದಲು ರಕ್ಷಣೆ

5BLH2
ಇಂಚಲದಲ್ಲಿ ಹಮ್ಮಿಕೊಂಡಿದ್ದ ಕೂದಲಿನ ಸಮಸ್ಯಗೆ ಉಚಿತ ತಪಾಸಣೆ ಶಿಬಿರವನ್ನು ಡಿ.ಬಿ.ಮಲ್ಲೂರ ಉದ್ಘಾಟಿಸಿದರು. ಡಾ.ಜಿ.ಎಸ್.ಹಾದಿಮನಿ, ಡಾ.ಮಹೇಶ ಪಾಟೀಲ, ಡಾ.ಜ್ಯೋತಿ ಅಂಕಲಗಿ ಇತರರು ಇದ್ದರು.
Published on

ಬೈಲಹೊಂಗಲ: ಒತ್ತಡದ ಜೀವನದಲ್ಲಿ ಆರೋಗ್ಯದ ಕಡೆ ಗಮನ ನೀಡಿದರೆ ಮಾತ್ರ ಮನುಷ್ಯ ಆರೋಗ್ಯದೊಂದಿಗೆ ಕೂದಲು ಹಾಗೂ ಚರ್ಮ ಕಾಪಾಡಿಕೊಳ್ಳಬಹುದು ಎಂದು ಡಾ.ಜ್ಯೋತಿ ಅಂಕಲಗಿ ಹೇಳಿದರು.

ಸಮೀಪದ ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ವಿಶ್ವ ಬೊಕ್ಕ ತಲೆ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕೂದಲಿನ ಸಮಸ್ಯೆಗೆ ತಪಾಸಣೆ ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೂಕ್ತ ಆಹಾರ ಕ್ರಮ, ಜೀವನ ಶೈಲಿ ಹಾಗೂ ಸಲಹೆ ಪಾಲಿಸಿದರೆ ಪ್ರತಿಯೊಬ್ಬರೂ ಆರೋಗ್ಯವಂತ ಕೂದಲು ಪಡೆದು ಸಂತೋಷದಿಂದ ಇರಬಹುದು. ದೇಹಕ್ಕೆ ಆರೈಕೆ ಹೇಗೆ ಅಗತ್ಯವೋ ಹಾಗೆಯೇ ಕೂದಲಿನ ಆರೈಕೆಯೂ ಮುಖ್ಯ ಎಂದರು.

ಪ್ರಾಚಾರ್ಯ ಡಾ.ವಿನಯಮೋಹನ ಮಾತನಾಡಿ, ಚರ್ಮ ಹಾಗೂ ಕೂದಲಿನ ರಕ್ಷಣೆಗಾಗಿ ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೌಂದರ್ಯ ಎಂಬ ಪ್ರತ್ಯೇಕ ವಿಭಾಗ ಪ್ರಾರಂಭಿಸಿದ್ದು. ಇದರಲ್ಲಿ ಆಯುರ್ವೇದಿಕ ಶಾಸ್ತ್ರೋಕ್ತ ಚಿಕಿತ್ಸೆ ಇದ್ದು ಸದುಪಯೋಗ ಪಡೆದುಕೊಳ್ಳಬೇಕೆಂದರು. ಶ್ರೀ ಶಿವಯೋಗೀಶ್ವರ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಿ.ಬಿ.ಮಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ತಲೆಗೂದಲು ಉದುರುವಿಕೆ, ತೆಲೆಹೊಟ್ಟಿನ ಸಮಸ್ಯೆ, ಕೂದಲು ತೆಳ್ಳಗಾಗುವಿಕೆ, ಕೂದಲು ನೆರೆತ ಕುರಿತು ಚಿಕಿತ್ಸೆ ನೀಡಲಾಯಿತು. ನೂರಾರು ಜನರು ಶಿಬಿರದ ಲಾಭ ಪಡೆದುಕೊಂಡರು.

ಉಪ ಪ್ರಾಚಾರ್ಯ ಡಾ.ಜಿ.ಎಸ್.ಹಾದಿಮನಿ, ಡಾ.ಕೆ.ಎಚ್.ಪಚ್ಚನ್ನವರ, ಡಾ.ಎಸ್.ಎಫ್.ಪಾಟೀಲ, ಡಾ.ಮಹೇಶ ಪಾಟೀಲ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net