

ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ಲಪುಷ್ಪ ಪ್ರದರ್ಶನದಲ್ಲಿ ಹಲವು ಉದ್ಯಾನಗಳು ಉತ್ತಮ ಪ್ರದರ್ಶನ ತೋರಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.
ಪಾಲಿಕೆ ವ್ಯಾಪ್ತಿಯ 42 ಉದ್ಯಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಇದರಲ್ಲಿ ಧಾರವಾಡ ಆಯುಕ್ತರ ಕಚೇರಿ ಉದ್ಯಾನ, ಮೃತ್ಯುಂಜಯ ಉದ್ಯಾನ, ಆರದ ಪಾರ್ಕ್ ಉದ್ಯಾನ ಸೇರಿ ಮೂರು ಚಾಂಪಿಯನ್ ಆಗಿವೆ.
ಹುಬ್ಬಳ್ಳಿಯ ಶ್ರೀನಿವಾಸನಗರ, ಆಯುಕ್ತರ ಮುಖ್ಯ ಕಚೇರಿ ಮುಂಭಾಗದ ಉದ್ಯಾನ, ಆಯುಕ್ತರ ಬಂಗಲೆ ಉದ್ಯಾನ, ನವನಗರ ಮುಖ್ಯ ಉದ್ಯಾನ, ಅಧ್ಯಾಪಕನಗರ ಉದ್ಯಾನ, ಲಿಂಗರಾಜನಗರ, ಗುರುದತ್ತ ಭವನ ಎದುರಿನ ಚಿಕ್ಕವಿರಯ್ಯನ ಪ್ಲಾಟ್, ಧಾರವಾಡದ ರಜತಗಿರಿ, ಕೊಪ್ಪದಕೇರಿ ಶಿವಾಲಯ ಉದ್ಯಾನಗಳು ಪ್ರಥಮ ಸ್ಥಾನ ಪಡೆದಿವೆ.
ವಿಶ್ವೇಶ್ವರನಗರ ಹತ್ತಿರದ ಬೃಂದಾವನ ಕಾಲನಿ, ಮಹಾವೀರ ಕಾಲನಿ, ಶೆಟ್ಟರ ಲೇಔಟ್, ಬನಶಂಕರಿ ಬಡಾವಣೆ, ಕುಮಾರ ಪಾರ್ಕ, ರೇಣುಕಾನಗರ, ಶ್ರೀರಾಮ ಕಾಲನಿ ಉದ್ಯಾನ, ಬಾಲಭವನ ಉದ್ಯಾನ, ಶಿರೂರು ಪಾರ್ಕ 1ನೇ ಹಂತ, ನಾಡಗೌಡ ಬಡಾವಣೆ ಸೇರಿ 11 ದ್ವೀತಿಯ ಸ್ಥಾನ ಪಡೆದಿವೆ.
ಮಹಾನಗರ ಪಾಲಿಕೆಗೆ ಉದ್ಯಾನ ವಿಭಾಗಕ್ಕೆ ಒಂದು ಜನರಲ್ ಚಾಂಪಿಯನ್ ದೊರೆತಿದೆ. ಪ್ರದರ್ಶನದ ಅಂಗವಾಗಿ ಹೂ-ಕುಂಡಗಳ ವಿಭಾಗದಲ್ಲಿ 17 ಪ್ರಥಮ, 9 ದ್ವೀತಿಯ ಹಾಗೂ ಪಾಲಿಕೆಗೆ ಲಪುಷ್ಪ ಪ್ರದರ್ಶನದಲ್ಲಿ ರನ್ನರ್ ಅಪ್ ಪ್ರಶಸ್ತಿ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ.