

ಧಾರವಾಡ: ಕೃಷಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಿದರು.
ಬೆಳಗಾವಿ ಜಿಲ್ಲೆಯ ಕಲ್ಲೋಳಿಯ ರಮೇಶ ಬಸಪ್ಪ ಖಾನಗೌಡ್ರ, ಹಾವೇರಿ ಜಿಲ್ಲೆಯ ಗೊಂದಿ ಗ್ರಾಮದ ಲಕ್ಷ÷್ಮ್ಮಣ ಬಸವಂತಪ್ಪ ಕೋಡಿಹಳ್ಳಿ, ಗದಗ ಜಿಲ್ಲೆಯ ಕುರ್ತಕೋಟಿಯ ಅಶೋಕ ವೀರಪ್ಪ ಹಾಳಕೇರಿ, ವಿಜಯಪುರ ಜಿಲ್ಲೆಯ ಹೆಗಡಿಹಾಳದ ಕಾಸಿರಾಯಗೌಡ ನೀಲನಗೌಡ ಬಿರಾದಾರ, ಬಾಗಲಕೋಟೆ ಜಿಲ್ಲೆಯ ಬಂಕನೇರಿಯ ಅಡಿವೆಪ್ಪ ಬಸಪ್ಪ ಬೂದಿ, ಉತ್ತರ ಕನ್ನಡ ಜಿಲ್ಲೆಯ ಹುಲಿಹೊಂಡದ ಬಸವರಾಜ ಈರಯ್ಯ ನಡುವಿನಮನಿ, ಧಾರವಾಡ ಜಿಲ್ಲೆಯ ಹೊಸಟ್ಟಿ ಗ್ರಾಮದ ಫಕ್ಕೀರಪ್ಪ ಸುಬ್ಬಣ್ಣ ಮುರಾರಿ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾದರು.