

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್-ಬಿ) ಕೊಡಮಾಡುವ 2022ನೇ ಸಾಲಿನ ಮೆ. ಜುವಾರಿ ಇಂಡಸ್ಟ್ರೀಸ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ವಿವಿಯ ಸಿಬ್ಬಂದಿ ತರಬೇತಿ ಘಟಕದ ಸಂಯೋಜಕ ಹಾಗೂ ಮುಖ್ಯಸ್ಥ ಡಾ. ಕೆ.ಶಿವರಾಮು ಆಯ್ಕೆ ಆಗಿದ್ದಾರೆ.
ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಅ.5ರಂದು ನಡೆಯಲಿರುವ ವಿವಿಯ 58ನೇ ಸಂಸ್ಥಾಪನಾ ದಿನಾಚರಣೆ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಮಾರಂಭದಲ್ಲಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯವರಾದ ಡಾ. ಕೆ.ಶಿವರಾಮು ಅವರು ಕೃಷಿ ವಿವಿಯ ವಿವಿಧ ವಿಭಾಗಗಳಲ್ಲಿ 28 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ತರಬೇತಿ ಮುಖ್ಯಸ್ಥರ ಜತೆಗೆ ಹಿರಿಯ ವಾರ್ತಾತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.