‘ಲಿಂಗಾಂಬುಧಿ ಕೆರೆ’ಗೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ

Award to Documentary - Copy
Published on

ನಗರದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಮೈಸೂರು: ಬೆಂಗಳೂರಿನ ಆರ್.ವಿ.ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಟೀನ್ ಇಂಡಿ ಫಿಲ್ಮ್ ಅವಾರ್ಡ್’ ರಾಷ್ಟ್ರೀಯ ಸ್ಪರ್ಧೆಯಲ್ಲಿ ನಗರದ ಇಬ್ಬರು ವಿದ್ಯಾರ್ಥಿಗಳು ತಯಾರಿಸಿರುವ ‘ಲಿಂಗಾಂಬುಧಿ ಕೆರೆ’ ಶೀರ್ಷಿಕೆಯ ಚಿತ್ರ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.


ಚಿತ್ರಗಳ ತಯಾರಿಕೆಯಲ್ಲಿ ಹದಿಹರೆಯದ ಮಕ್ಕಳಲ್ಲಿ ಇರುವ ಆಸಕ್ತಿ ಮತ್ತು ಕೌಶಲ ಉತ್ತೇಜಿಸುವ ಉದ್ದೇಶದಿಂದ ಆರ್.ವಿ. ವಿಶ್ವವಿದ್ಯಾಲಯ ಸ್ಪರ್ಧೆ ಆಯೋಜಿಸಿತ್ತು. ದೇಶದ ವಿವಿಧ ಪ್ರದೇಶ ಮತ್ತು ಭಾಷೆಗಳಿಂದ ಬಂದಿದ್ದ ಕಿರುಚಿತ್ರಗಳ ಪೈಕಿ 18 ಚಿತ್ರಗಳು ಸ್ಕ್ರೀನಿಂಗ್‌ಗೆ ನಾಮ ನಿರ್ದೇಶನಗೊಂಡಿದ್ದವು. ಈ ಪೈಕಿ ಕನ್ನಡದಿಂದ ಆಯ್ಕೆಗೊಂಡಿದ್ದ ‘ಲಿಂಗಾಂಬುಧಿ ಕೆರೆ’ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕುವೆಂಪುನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾಗಿರುವ ಪ್ರೀತಮ್‌ರಾಜ್ ಮತ್ತು ಶ್ರೇಷ್ಠ ಎಸ್.ಜುಪ್ತಿಮಠ ಈ ಸಾಕ್ಷೃಚಿತ್ರ ನಿರ್ಮಿಸಿದ್ದಾರೆ.
ಆರ್.ವಿ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net