

ಪುತ್ತೂರು ಗ್ರಾಮಾಂತರ: ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಮೂಲತಃ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಕುಕ್ಕಾಡಿ ನಿವಾಸಿಯಾಗಿದ್ದು, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಕಲ್ಲಾಜೆ ಎಂಬಲ್ಲಿ ನೆಲೆಸಿರುವ ಪ್ರಸಾದ್ ಕೆ.ಶೆಟ್ಟಿ ‘ಉತ್ತಮ ಹಿನ್ನೆಲೆ ಸಂಗೀತ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅರ್ಜುನ್ ಲೂಯಿಸ್ ನಿರ್ದೇಶನದ ಪರ್ಸ್ಪೆಕ್ಟಿವ್ ಎಂಬ ಕಿರುಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವ ಅವರು ಆ.31ರಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಕಾರ್ನರ್ ಸೀಟ್ ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್‌ನಲ್ಲಿ ತಮಿಳು ಚಿತ್ರರಂಗದ ಗಣ್ಯರಿಂದ ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಸ್ವೀಕರಿಸಿದರು. ದಿ.ವಿಠಲ ಶೆಟ್ಟಿ ಮತ್ತು ರತ್ನಾ ವಿ.ಶೆಟ್ಟಿ ದಂಪತಿ ಪುತ್ರ.