

ವಿಜಯವಾಣಿ ಸುದ್ದಿಜಾಲ ಧಾರವಾಡ
ತಂದೆ ಹಾಗೂ ಮಗಳ ಸಾಧನೆ ಒಂದೇ ದಿನ ಡಬಲ್ ಖುಷಿಗೆ ಕಾರಣವಾಯಿತು. ತಂದೆ ಕೃಷಿ ವಿಶ್ವವಿದ್ಯಾಲಯದಿಂದ ಉತ್ತಮ ಕನ್ನಡ ಕೃಷಿ ಲೇಖನ' ಪ್ರಶಸ್ತಿಗೆ ಭಾಜನರಾದರು. ಅವರ ಮಗಳು ಕರ್ನಾಟಕ ವಿಶ್ವವಿದ್ಯಾಲದ ಘಟಿಕೋತ್ಸವದಲ್ಲಿ ಎಂ.ಎಸ್‌ಸಿ ಜೀವಶಾಸ್ತç ಸ್ನಾತಕೋತ್ತರ ಪದವಿಯಲ್ಲಿ 8 ಚಿನ್ನದ ಪದಕ ಪಡೆದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿರುವ ಚನ್ನಪ್ಪ ಅಂಗಡಿ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ ನೀಡುವಡಾ. ಚನ್ನವೀರ ಕಣವಿ ಉತ್ತಮ ಕನ್ನಡ ಕೃಷಿ ಲೇಖನ' ಪ್ರಶಸ್ತಿ ಪ್ರದಾನ ಮಾಡಲಾಯಿತು. `ಪೈರಿಗೆ ನೀರು ಬೇಕೆಂಬಲ್ಲಿ' ಲೇಖನಕ್ಕೆ ಉತ್ತಮ ಕನ್ನಡ ಕೃಷಿ ಲೇಖನ' ಪ್ರಶಸ್ತಿ ಲಭಿಸಿತು. ಕುಲಪತಿ ಡಾ. ಪಿ.ಎಲ್. ಪಾಟೀಲ, ಕುಲಸಚಿವೆ ಜಯಲಕ್ಷಿ÷್ಮÃ ರಾಯಕೋಡ ಹಾಗೂ ಇತರರಿದ್ದರು.
ಅವರ ಮಗಳು ವಿಸ್ಮಯ ಅಂಗಡಿ ಎಂ.ಎಸ್‌ಸಿ ಜೀವಶಾಸ್ತç ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ಗಳಿಸಿ 8 ಚಿನ್ನದ ಪದಕಗಳಿಗೆ ಕೊರಳೊಡ್ಡಿದರು. ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್.ಅಯ್ಯಪ್ಪನ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಚಿನ್ನದ ಪದಕ ಪ್ರದಾನ ಮಾಡಿದರು.
ತಂದೆ ಹಾಗೂ ಮಗಳು ಒಂದೇ ದಿನ ಪ್ರತ್ಯೇಕ 2 ವಿಶ್ವವಿದ್ಯಾಲಯಗಳಿಂದ ಗೌರವಕ್ಕೆ ಭಾಜನವಾಗಿದ್ದು ವಿಶೇಷ.