ಪಠ್ಯದ ಜತೆಗೆ ಪಠ್ಯೇತರವೂ ಮುಖ್ಯ: ಗ್ರಾಪಂ ಕಾರ್ಯದರ್ಶಿ ವೆಂಕಟರಾಮು ಸಲಹೆ

2 (1)
Published on

ಶ್ರೀರಂಗಪಟ್ಟಣ: ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಅಂತೆಯೇ ಗಾಳಿ, ಬೆಳಕು ಮಣ್ಣಿನ ಲಭ್ಯ ಇರುವ ಆರೋಗ್ಯಕರ ವಾತಾವರಣವನ್ನು ಪಡೆದುಕೊಂಡು ಮನೋವಿಕಸನ ಹೊಂದಬೇಕು ಎಂದು ಬಲ್ಲೇನಹಳ್ಳಿ ಗ್ರಾ.ಪಂ ಕಾರ್ಯದರ್ಶಿ ವೆಂಕಟರಾಮು ಸಲಹೆ ನೀಡಿದರು.

ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಗ್ರಂಥಾಲಯ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ 7ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಕ್ರೀಡೆಗಳು ವಿಜ್ಞಾನ ಹಾಗೂ ಗಣಿತಕ್ಕೆ ತೀರ ಹತ್ತಿರ ಸಂಬಂಧವನ್ನು ಹೊಂದಿದೆ. ಮಕ್ಕಳು ಆಟವಾಡುತ್ತಾ, ಕುಣಿಯುತ್ತಾ, ನಟಿಸುತ್ತಾ, ಕಲಿಯುವ ಅವಕಾಶಗಳು ಅತಿ ಹೆಚ್ಚಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಬಿರದ ಆಯೋಜಿಕ ಹಾಗೂ ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್, ಮಕ್ಕಳಿಗೆ ಲಗೋರಿ, ಲೆಮನ್ ಸ್ಪೂನ್, ಕೇರಂ ಬೋರ್ಡ್ ಹಾಗೂ ಅಂಕಿ ಸಂಖ್ಯೆ ಬಗ್ಗೆ ಕೇಂದ್ರೀಕರಿಸಲು ಸಂಖ್ಯಾ ಚಟುವಟಿಕೆ ಬಗ್ಗೆ ನಿರ್ದೇಶನ ನೀಡಿ ಆಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ವಿದ್ಯಾರ್ಥಿಗಳು ಸಹ ಲವ ಲವಿಕೆಯಿಂದ ದಿನವಿಡಿ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಕೊಂಡು ಹರ್ಷ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪವಿತ್ರಾ, ಅರುಣ್, ಮಹೇಶ್, ರಾಜಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net