ಜಿಲ್ಲೆಯಲ್ಲಿ ಬೆಸ್ಕಾಂ ನೌಕರರ ಸಾಂಕೇತಿಕ ಪ್ರತಿಭಟನೆ

05TMK_KPTCL_Protest
Published on

ತುಮಕೂರು: ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ವಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಹಾಗೂ ಸರ್ಕಾರ ತಯಾರಿಸಿರುವ ದಸ್ತಾವೇಜುಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಬೆಸ್ಕಾಂ ನೌಕರರು ನಗರದ ಶಿವಕುವಾರಸ್ವಾಮೀಜಿ ವೃತ್ತದ ಬೆಸ್ಕಾಂ ವೃತ್ತ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಬೆಸ್ಕಾಂ ವೃತ್ತ ಕಚೇರಿ ಅಧೀಕ್ಷಕ ಇಂಜಿನಿಯರ್ ಗೋವಿಂದಪ್ಪ ವಾತನಾಡಿ, ರಾಜ್ಯದಲ್ಲಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ಸರಿಯಲ್ಲ ಎಂದರು.

ರೈತರು, ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ಈ ಮೂರು ಕಂಪನಿಗಳು ಅದರಲ್ಲಿಯೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಇಡೀ ರಾಜ್ಯದಲ್ಲಿಯೇ ಅತ್ಯುನ್ನತ ಸೇವೆಗೆ ಹೆಸರಾಗಿದೆ ಎಂದು ಹೇಳಿದರು.

ವಿದ್ಯುತ್ ಸರಬರಾಜು, ಕರ ವಸೂಲಿಯಲ್ಲಿಯೂ ಮುಂಚೂಣಿಯಲ್ಲಿದೆ. ಅಲ್ಲದೆ ಸರ್ಕಾರದ ಎಸ್ಸಿಪಿ, ಟಿ.ಎಸ್‌ಪಿ, ಕುಟೀರ ಜೋತಿ, ಭಾಗ್ಯ ಜೋತಿ, ರೈತರ ಪಂಪಸೆಟ್ ಇನ್ನಿತರ ಯೋಜನೆಗಳ ಮೂಲಕ ವಿದ್ಯುತ್ ಸಂಪರ್ಕ ಪಡೆದವರಿಗೂ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಹೀಗಿದ್ದೂ ಸರ್ಕಾರ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗೀಕರಣ ವಾಡಲು ಹೊರಟಿರುವುದರ ಹಿಂದಿರುವ ಹುನ್ನಾರವೇನು ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕೆಪಿಟಿಸಿಎಲ್‌ನ ಕಾರ್ಯಪಾಲಕ ಇಂಜಿನಿಯರ್ ಚನ್ನವೀರಯ್ಯ, ಸಂದ ಕಾರ್ಯಕಾರಿ ಮಂಡಳಿ ಸದಸ್ಯರಾದ ಗಿರೀಶ್ ಕಾರ್ನಾಡ್, ಸಂದ ಪದಾಧಿಕಾರಿಗಳಾದ ವೆಂಕಟರಮಣಪ್ಪ, ಹನುಮಂತರಾಯಪ್ಪ, ಪ್ರಶಾಂತ್ ಕೂಡ್ಲಿಗಿ, ಶ್ರೀನಾಥ್, ಶಿವಶಂಕರ್, ಆನಂತರಾಮಯ್ಯ, ಮಹಮದ್ ಷರೀಫ್ ಸೇರಿ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ರೈತ ವಿರೋಧಿ ನೀತಿ: ಕೇಂದ್ರ ಸರ್ಕಾರ ಯಾವುದೇ ನಷ್ಟವಿಲ್ಲದೆ ಲಾಭದಲ್ಲಿಯೇ ನಡೆದುಕೊಂಡು ಹೋಗುತ್ತಿರುವ ಕಂಪನಿಗಳನ್ನು ಖಾಸಗೀಕರಣ ಗೊಳಿಸಲು ಹೊರಟಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಕೆಪಿಟಿಸಿಎಲ್ ನೌಕರರ ಸಂದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಕೆ.ಗಂಗಾಧರಪ್ಪ ಹೇಳಿದರು. ಖಾಸಗೀಕರಣದಿಂದ ಈಗ ನೀಡುತ್ತಿರುವ ಸೇವೆಯನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ 2003ರ ವಿದ್ಯುತ್ ಕಾಯ್ದೆ ಮುಂದುವರೆಸಬೇಕು, 2020ರ ಹೊಸ ಕಾಯ್ದೆಯನ್ನು ಬೆಸ್ಕಾಂ ನೌಕರರು ದಿಕ್ಕರಸಲಿದ್ದೇವೆ. ಸರ್ಕಾರ ಖಾಸಗೀಕರಣದಿಂದ ಹಿಂದೆ ಸರಿಯದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net