ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಬಿಲ್!

bore
Published on

 ಶಿವರಾಜ ಎಂ ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ಹಲವು ಪಂಚಾಯಿತಿ ವ್ಯಾಪ್ತಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಬಳಕೆಯೂ ಇಲ್ಲದ ವಿಲ ಕೊಳವೆಬಾವಿಗಳಿಗೂ ಪ್ರತಿ ತಿಂಗಳು ಪಂಚಾಯಿತಿ ಬೆಸ್ಕಾಂಗೆ ವಿದ್ಯುತ್ ಶುಲ್ಕ ಭರಿಸುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಗ್ರಾಮಗಳಿಗೆ ಕುಡಿವ ನೀರು ಪೂರೈಸಲು ಕೊರೆಸಿರುವ ಕೊಳವೆಬಾವಿಗಳಲ್ಲಿ ಅನೇಕ ವರ್ಷದಿಂದ ಹಲವು ಕೊಳವೆಬಾವಿಗಳು ಕಾರ್ಯ ಸ್ಥಗಿತಗೊಳಿಸಿವೆ, ಅಂತರ್ಜಲವಿಲ್ಲದೆ ವಿಲಗೊಂಡಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನೂ ಸ್ಥಗಿತಗೊಳಿಸಲಾಗಿದೆ ಆದರೆ ಪ್ರತಿ ತಿಂಗಳು ಸ್ಥಿರ ಶುಲ್ಕದ ಹೆಸರಿನಲ್ಲಿ ಬೆಸ್ಕಾಂ ಹಣ ವಸೂಲಿ ಮಾಡುತ್ತಿದೆ.

ಪಂಚಾಯಿತಿ ಬೆಪ್ಪು ಮಾಡುತ್ತಿರುವ ಬೆಸ್ಕಾಂ: ಪಂಚಾಯಿತಿ ಅಧೀನದಲ್ಲಿನ ಕೊಳವೆಬಾವಿಗಳಿಗೆ ಪಂಚಾಯಿತಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುತ್ತಿದೆ, ಆದರೆ ಬೆಸ್ಕಾಂ ಅಧಿಕಾರಿಗಳು ೇಲ್ ಆಗಿ ವಿದ್ಯುತ್ ಸಂಪರ್ಕ ಕಡಿಗೊಂಡಿರುವ ಬೊರ್‌ವೆಲ್‌ಗಳ ಆರ್‌ಆರ್ ಸಂಖ್ಯೆಗೂ ಇದೇ ಮೊತ್ತವನ್ನು ಜಮೆ ಮಾಡಿಕೊಳ್ಳುತ್ತಿದೆ, ಇದರಿಂದ ಪಂಚಾಯಿತಿಯಲ್ಲಿ ಬಿಲ್ ಬಾಕಿ ಉಳಿಯುವಂತಾಗಿದೆ, ಪಂಚಾಯಿತಿ ಅವರು ಕಾರ್ಯನಿರ್ವಹಿಸುತ್ತಿರುವ ಬೊರ್‌ವೆಲ್‌ಗಳಿಗೆ ಮಾತ್ರ ಬಿಲ್ ಪಾವತಿಸುತ್ತಿದ್ದಾರೆ, ಆದರೆ ಉಳಿದ ೇಲ್ ಆದ ಬೋರ್‌ವೆಲ್‌ಗಳಿಗೂ ಇದೇ ಹಣವನ್ನು ಹಂಚಿಕೆ ಮಾಡುವ ಮೂಲಕ ಬೆಸ್ಕಾಂ ಜಾಣತನ ತೋರಿಸುವ ಮೂಲಕ ಪಂಚಾಯಿತಿಯನ್ನು ಬೆಪ್ಪು ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಪಂಚಾಯಿತಿ ಪಿಡಿಒಗಳ ನಿರ್ಲಕ್ಷ್ಯ: ಗ್ರಾಮ ಪಂಚಾಯಿತಿ ಮತ್ತು ಬೆಸ್ಕಾಂ ಇಲಾಖೆ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಈ ಸಮಸ್ಯೆ ಕಾಡುತ್ತಿದೆ, ಬಳಕೆ ಇಲ್ಲದ ಕೊಳವೆಬಾವಿಗಳಿಗೂ ಆರ್‌ಆರ್ ಸಂಖ್ಯೆ ಇರುವುದರಿಂದ ಗ್ರಾಪಂ ಪಿಡಿಒಗಳು ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಲಗೊಂಡಿರುವ ಕೊಳವೆಬಾವಿಗಳ ಆರ್‌ಆರ್ ಸಂಖ್ಯೆಯನ್ನು ತೆಗೆಸಬೇಕು, ಆದರೆ ಪಿಡಿಒಗಳಿಗೆ ಈ ಬಗ್ಗೆ ಆಸಕ್ತಿ ಇಲ್ಲ, ಬೆಸ್ಕಾಂ ಅಧಿಕಾರಿಗಳಿಗೆ ಇದರ ಅವಶ್ಯಕತೆ ಇಲ್ಲ ಆದ್ದರಿಂದ ವಿದ್ಯುತ್ ಸಂಪರ್ಕವಿಲ್ಲದರೂ ಪಂಚಾಯಿತಿ ತೆರಿಗೆ ಬೆಸ್ಕಾಂ ಪಾಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಹಲವು ವರ್ಷದಿಂದಲೂ ಹೀಗೆ: ಹಲವು ವರ್ಷಗಳಿಂದಲೂ ಇದೇ ಪರಿಸ್ಥಿತಿ ಮುಂದುವರೆದಿದೆ, ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ, ಜಿಪಂ ಸಿಇಒ ವತಿಯಿಂದ ಬೆಸ್ಕಾಂ ಎಂಡಿ ಅವರ ಗಮನಕ್ಕೆ ತಂದು ಆರ್‌ಆರ್ ಸಂಖ್ಯೆ ಡಿಲೀಟ್ ಮಾಡುವಂತೆ ಮನವಿ ಪತ್ರ ಸಲ್ಲಿಸಲಾಗಿದೆ, ಆದರೆ ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕುಡಿಯುವ ನೀರು ವಿಭಾಗದ ನಿವೃತ್ತ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

566 ಬೊರ್‌ವೆಲ್‌ಗಳಿಗೆ ಶುಲ್ಕ:

ದೇವನಹಳ್ಳಿ 43, ಹೊಸಕೋಟೆ 146, ದೊಡ್ಡಬಳ್ಳಾಪುರ 289, ನೆಲಮಂಗಲದಲ್ಲಿ 88 ಸೇರಿ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸ್ತುತ 566 ಕೊಳವೆ ಬಾವಿಗಳಿಗೆ ಸರಾಸರಿ ಶುಲ್ಕ ವಿಧಿಸಲಾಗುತ್ತಿದೆ,ಇಷ್ಟೂ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವು ಚಾಲ್ತಿಯಲ್ಲಿ ಇಲ್ಲದಿದ್ದರೂ ಬೆಸ್ಕಾಂ ವತಿಯಿಂದ ಸರಾಸರಿ ಸ್ಥಿರ ಶುಲ್ಕ ವಸೂಲಿ ಮಾಡಲಾಗುತ್ತಿದೆ, ವಿದ್ಯುತ್ ಸಂಪರ್ಕ ಇಲ್ಲದ ಆರ್ ಆರ್ ಸಂಖ್ಯೆಗಳನ್ನು ಬೆಸ್ಕಾಂ ತಂತ್ರಾಂಶದಿಂದ ಡಿಲೀಟ್ ಮಾಡಿಸಿಲ್ಲ. ಒಂದು ಕಡೆ ವಿದ್ಯುತ್ ಸಂಪರ್ಕ ಇಲ್ಲ ಅಂತ ಗೊತ್ತಿದ್ದರೂ ಬೆಸ್ಕಾಂ ಸರಾಸರಿ ಶುಲ್ಕ ವಿಧಿಸಿ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದರೆ ಗ್ರಾಪಂ ನಿರ್ಲಕ್ಷ್ಯಿಂದ ಪಂಚಾಯಿತಿ ಬೊಕ್ಕಸ ಬರಿದಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಲಗೊಂಡಿರುವ ವಿದ್ಯುತ್ ಸಂಪರ್ಕವಿಲ್ಲದ ಕೊಳವೆಬಾವಿಗಳಿಗೂ ಬೆಸ್ಕಾಂ ಶುಲ್ಕ ವಿಧಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ, ಕೊಳವೆಬಾವಿಗಳಿಗೆ ನೀಡಿರುವ ಆರ್‌ಆರ್ ಸಂಖ್ಯೆಯನ್ನು ಬೆಸ್ಕಾಂ ತಂತ್ರಾಂಶದಿಂದ ಡಿಲೀಟ್ ಮಾಡುವಂತೆ ತಿಳಿಸಿದ್ದೇವೆ, ಶೀಘ್ರದಲ್ಲೇ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳ ಜತೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು.

ಶ್ರೀಕಾಂತ್, ಜಿಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net