ಸಮಾನ ಶಿಕ್ಷಣದ ಜವಾಬ್ದಾರಿ ಪಾಲಕರು ನಿರ್ವಹಿಸಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಬುರಡಿ

Bheda-Bhava Illade Yallarigoo Saman Shikshan Javabdari Palakru Nirvahisali - Buradi News Photo
Published on

ಗದಗ: ಗಂಡು ಹೆಣ್ಣಿನ ಬೇಧ&ಭಾವ ಇಲ್ಲದೆಯೇ ಎಲ್ಲರಿಗೂ ಸಮಾಜ ಶಿಕ್ಷಣ ನೀಡುವ ಮಹತ್ತರ ಜವಾಬ್ದಾರಿಯನ್ನು ಪಾಲಕರು ನಿರ್ವಹಿಸಬೇಕು ಎಂದು ಶಹರ ವಲಯದಕ್ಷೇತ್ರ ಶಿಕ್ಷಣಾಧಿಕಾರಿ ಆರ್​. ಎಸ್​. ಬುರಡಿ ಹೇಳಿದರು.
ನಗರದ ಸಿ. ಎಸ್​. ಪಾಟೀಲ ಸಮೂಹ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ವಾಷಿರ್ಕ ಸ್ನೇಹ ಸಮ್ಮೇಳನದದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ವರ್ಗದ ಅಧಿಕಾರಿಗಳೇ ಅತ್ಯಧಿಕ ಇದ್ದಾರೆ. ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾ-ಧಿಸಬಹುದು. ಇದಕ್ಕಾಗಿ ಹೆಣ್ಣುಮಕ್ಕಳು ತಮ್ಮ ವಿದ್ಯಾಥಿರ್ ಜೀವನದಲ್ಲಿ ಪರಿಶ್ರಮ ಪಡಬೇಕು ಎಂದರು.
ನಿವೃತ್ತ ಸೈನಿಕ ಬಸವಣ್ಣೆಪ್ಪ ಕರಿ ಮಾತನಾಡಿದರು. ಸಂಸ್ಥೆಯ ಗೌರವ ಕಾರ್ಯದಶಿರ್ ವೀರನಗೌಡ ಅಂದಾನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಟಿ. ಎಸ್​. ಬಂಡಿಹಾಳ, ಐ. ಎಸ್​. ಗೌಡರ, ಎನ್​. ಎಸ್​. ಹಂಜಗಿ, ಎನ್​. ವಿ. ಪಾಟೀಲ, ಆರ್​. ಎಲ್​. ಹಂಸನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net