

ಹರಪನಹಳ್ಳಿ: ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡನ್ನೂ ಸಮನಾಗಿ ತೆಗೆದುಕೊಂಡು ಹೋದಲ್ಲಿ ಭವಿಷ್ಯ ಉತ್ತಮವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಎರಡನ್ನೂ ಸಮನಾಗಿ ತೆಗೆದುಕೊಳ್ಳಬೇಕು. ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪು ನೀಡಬೇಕು ಎಂದು ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ಗ್ರಾಮೀಣ ಮಕ್ಕಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ಹೆಚ್ಚಿನ ತರಬೇತಿ ಮತ್ತು ಪ್ರೋತ್ಸಾಹ ನೀಡಿದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಪ್ರೌಢಶಾಲಾ ಮಟ್ಟದ ಬಾಲಕಿಯರ ವಿಭಾಗದ ಖೋಖೋದಲ್ಲಿ ಚಿಗಟೇರಿ ನಾರದಮುನಿ ಪ್ರೌಢಶಾಲೆ(ಪ್ರಥಮ), ಬಾಗಳಿ ಆರ್‌ಎಚ್‌ಸಿ ಶಾಲೆ (ದ್ವೀತಿಯ) ಸ್ಥಾನ ಪಡೆದುಕೊಂಡವು. ಕಬ್ಬಡ್ಡಿಯಲ್ಲಿ ಕಡಬಗೇರಿ ಜಿಎಚ್‌ಎಸ್(ಪ್ರಥಮ), ಗೋವೆರಹಳ್ಳಿ ಜಿಎಚ್‌ಎಸ್(ದ್ವೀತಿಯ), ವಾಲಿಬಾಲ್ ತೆಲಿಗಿ ಜಿಎಚ್‌ಎಸ್(ಪ್ರಥಮ), ಮಾದಿಹಳ್ಳಿ ಜಿಎಚ್‌ಎಸ್(ದ್ವೀತಿಯ), ಥ್ರೋಬಾಲ್ ಕೆ.ಕಲ್ಲಹಳ್ಳಿ ಎಬಿಎಂ ಶಾಲೆ (ಪ್ರಥಮ), ಹಿಕ್ಕಿಂಗೇರಿ ಜಿಎಚ್‌ಎಸ್(ದ್ವೀತಿಯ), ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಕಂಚಿಕೇರಿ ಸಿದ್ದೇಶ್ವರ ವಸತಿ ಶಾಲೆ (ಪ್ರಥಮ), ತೆಲಿಗಿ ಜಿಎಚ್‌ಎಸ್(ದ್ವೀತಿಯ), ಷಟಲ್ ಬ್ಯಾಡ್ಮಿಂಟನ್ ಜಿಎಚ್‌ಎಸ್ ಹಿಕ್ಕಿಂಗೇರಿ(ಪ್ರಥಮ), ಮುತ್ತಿಗಿ ಪ್ರೌಢಶಾಲೆ (ದ್ವೀತಿಯ) ಸ್ಥಾನ ಪಡೆದುಕೊಂಡವು.
ಬಾಲಕರ ವಿಭಾಗದ ಖೋಖೋದಲ್ಲಿ ಚಿಗಟೇರಿ ನಾರದಮುನಿ ಪ್ರೌಢಶಾಲೆ (ಪ್ರಥಮ), ನಿರ್ಮಲಾ ಶಾಲೆ (ದ್ವೀತಿಯ), ಕಬ್ಬಡ್ಡಿಯಲ್ಲಿ ಕಂಚಿಕೇರಿ ಸಿದ್ದೇಶ್ವರ (ಪ್ರಥಮ), ಮುತ್ತಿಗಿ ಜಿಎಚ್‌ಎಸ್(ದ್ವೀತಿಯ), ವಾಲಿಬಾಲ್ ಹಗರಿ ಗಜಾಪುರ ಜಿಎಚ್‌ಎಸ್(ಪ್ರಥಮ), ಶಿವಪುರ ಜಿಎಚ್‌ಎಸ್(ದ್ವೀತಿಯ), ಥ್ರೋಬಾಲ್ ಗುಂಡಗತ್ತಿ ವೆಂಕಟೇಶ್ವರ ಪ್ರೌಢಶಾಲೆೆ (ಪ್ರಥಮ), ಹಿಕ್ಕಿಂಗೇರಿ ಜಿಎಚ್‌ಎಸ್ (ದ್ವೀತಿಯ), ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಉಚ್ಚಂಗಿದುರ್ಗ ಉತ್ಸವಾಂಬ ಪ್ರೌಢಶಾಲೆ(ಪ್ರಥಮ), ನಜೀರ್‌ನಗರ ಮುರಾರ್ಜಿ ವಸತಿ ಶಾಲೆ (ದ್ವೀತಿಯ), ಷಟಲ್ ಬ್ಯಾಡ್ಮಿಂಟನ್ ಹರಪನಹಳ್ಳಿ ವಿದ್ಯಾನಿಧಿ (ಪ್ರಥಮ), ಚಿಕ್ಕಮೇಗಳಗೆರೆ ದುರ್ಗಾಂಬಿಕಾ ಪ್ರೌಢಶಾಲೆ (ದ್ವೀತಿಯ)ಸ್ಥಾನ ಪಡೆದುಕೊಳ್ಳುವ ಮೂಲಕ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದವು.