ಜಮೀನಿನಲ್ಲಿ ಬಾಗಿದ ವಿದ್ಯುತ್ ಕಂಬಗಳು

7.ktal.01
Published on

ಕವಿತಾಳ: ವಟಗಲ್, ಅಮೀನಗಡ ಹಾಗೂ ತೋರಣದಿನ್ನಿ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಕೃಷಿ ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು ಬಾಗಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ಅಮೀನಗಡದಲ್ಲಿ ಕಳೆದ ಆರು ತಿಂಗಳಿಂದ ಹೊಲದಲ್ಲಿನ ವಿದ್ಯುತ್ ತಂತಿಗಳು ಬಾಗಿದ್ದು, ಈ ಬಗ್ಗೆ ರೈತರು ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲಸ ಮಾಡಲು ನೀವೇ ಮೂರು ಜನರನ್ನು ಕರೆದುಕೊಂಡು ಬರುವಂತೆ ಜೆಸ್ಕಾಂ ಅಧಿಕಾರಿಗಳ ಸೂಚನೆ ಮೇರೆಗೆ ರೈತರು ಜನರನ್ನು ಕರೆದುಕೊಂಡು ಹೋದರೆ ನಾಳೆ ಬನ್ನಿ ಎನ್ನುತ್ತಿದ್ದಾರೆ. ಇದರಿಂದಾಗಿ ಬಾಗಿದ ಕಂಬಗಳ ಸರಿಪಡಿಸುವ ಕೆಲಸ ನನೆಗುದಿಗೆ ಬಿದ್ದಿದೆ.

ತೋರಣದಿನ್ನಿ, ವಟಗಲ್ ಗ್ರಾಪಂ ವ್ಯಾಪ್ತಿಯ ಮುಖ್ಯ ನಾಲೆ ಬದಿ ಇರಕಲ್‌ನಿಂದ ಬಸ್ಸಾಪೂರವರೆಗೆ ಹೊಲದಲ್ಲಿ ವಿದ್ಯುತ್ ಕಂಬಗಳು ಬಾಗಿವೆ. ಅನಾಹುತ ಸಂಭಿಸುವ ಮುಂಚೆ ಸರಿಪಡಿಸಬೇಕೆಂಬುದು ಗ್ರಾಮಸ್ಥರಾದ ಶ್ರೀನಿವಾಸ ಇರಕಲ್, ಮೌಲಸಾಬ್ ಬಸ್ಸಾಪೂರ, ಹುಚ್ಚಪ್ಪ ಅಮೀನಗಡ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net