

ಕಾರಟಗಿ: ತಾಲೂಕಿನ ಬೆನ್ನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರ ಕಬ್ಬಡ್ಡಿ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಅ.8ರಂದು ಬಳ್ಳಾರಿಯ ನಂದಿ ಪ್ರೌಢ ಶಾಲೆಯಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಬೆನ್ನೂರು ಶಾಲೆಯ ಬಾಲಕಿಯರ ತಂಡ ಕಬ್ಬಡ್ಡಿಯಲ್ಲಿ ಪ್ರತಿಸ್ಪರ್ಧಿ ರಾಯಚೂರು ಜಿಲ್ಲೆಯ ತಂಡವನ್ನು ಮಣಿಸಿದೆ. ಬಾಲಕಿಯರ ರೋಚಕ ಪ್ರದರ್ಶನದಿಂದ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ಆಡಳಿತ ಮಂಡಳಿ, ಮುಖ್ಯಶಿಕ್ಷಕ ಎಸ್.ಎಲ್. ಪ್ರಕಾಶ, ತರಬೇತುದಾರರಾದ ಯಲ್ಲಾಲಿಂಗ, ಶಿವರಾಜಕುಮಾರ ಬಾಲಕಿಯರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.