ಶಿಕ್ಷಕರ ಕ್ಷೇತ್ರದ ಚುನಾವಣೆ ಅಗ್ನಿ ಪರೀಕ್ಷೆ

ಜೆಡಿಎಸ್​ ಯುವ ಟಕ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿಕೆ
ದೊಡ್ಡಬಳ್ಳಾಪುರದ ವಿಧಾನಪರಿಷತ್​ ಬೆಂಗಳೂರು ಶಿಕ್ಷಕರ ೇತ್ರದ ಬಿಜೆಪಿ&ಜೆಡಿಎಸ್​ ಕಾರ್ಯಕರ್ತ ಸಭೆಗೆ ಜೆಡಿಎಸ್​ ಯುವ ಟಕ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಚಾಲನೆ ನೀಡಿದರು. ಶಾಸಕ ಧೀರಜ್​ ಮುನಿರಾಜು, ಎನ್​ಡಿಎ ಅಭ್ಯರ್ಥಿ ರಂಗನಾಥ, ಬಿಜೆಪಿ ಉಸ್ತುವಾರಿ ಗೋಪಿನಾಥರೆಡ್ಡಿ ಇತರರಿದ್ದರು.
ದೊಡ್ಡಬಳ್ಳಾಪುರದ ವಿಧಾನಪರಿಷತ್​ ಬೆಂಗಳೂರು ಶಿಕ್ಷಕರ ೇತ್ರದ ಬಿಜೆಪಿ&ಜೆಡಿಎಸ್​ ಕಾರ್ಯಕರ್ತ ಸಭೆಗೆ ಜೆಡಿಎಸ್​ ಯುವ ಟಕ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಚಾಲನೆ ನೀಡಿದರು. ಶಾಸಕ ಧೀರಜ್​ ಮುನಿರಾಜು, ಎನ್​ಡಿಎ ಅಭ್ಯರ್ಥಿ ರಂಗನಾಥ, ಬಿಜೆಪಿ ಉಸ್ತುವಾರಿ ಗೋಪಿನಾಥರೆಡ್ಡಿ ಇತರರಿದ್ದರು.
Published on: 

ದೊಡ್ಡಬಳ್ಳಾಪುರ : ಮಾಜಿ ಪ್ರಧಾನಿ ದೇವೇಗೌಡ, ಪ್ರಧಾನಿ ಮೋದಿ ನೇತೃತ್ವದಲ್ಲಿ ತಳಮಟ್ಟದಿಂದ ಸ್ವಾಭಾವಿಕ ಮೈತ್ರಿ ಮಾಡಿಕೊಳ್ಳಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಒಂದು ಅಗ್ನಿ ಪರೀೆ ಎಂದು ಜೆಡಿಎಸ್​ ಯುವ ಟಕ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದರು.

ವಿಧಾನಪರಿಷತ್​ ಚುನಾವಣೆಯ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್​ ಕಾರ್ಯಕರ್ತರು ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್​ ಅವರ ಮಾತುಗಳನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಸ್ವಾಭಾವಿಕ ಮೈತ್ರಿಕೂಟವಾಗಿದ್ದು, ನಮ್ಮದು ಕಾಂಗ್ರೆಸ್​ ವಿರುದ್ಧದ ಹೋರಾಟ. ರಾಜ್ಯದಿಂದ ಬೂತ್​ ಮಟ್ಟದವರೆಗೂ ಬಿಜೆಪಿ, ಜೆಡಿಎಸ್​ ನಾಯಕರ ಮನಸ್ಸು ಒಂದಾಗಬೇಕು. ಕುಮಾರಸ್ವಾಮಿ ಅವರಿಂದ ಬೆಳೆದ ವ್ಯಕ್ತಿ ಪುಟ್ಟಣ್ಣ ಕೇವಲ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಾ, ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಾರಿ ಮತದಾರರು ದುರಾಡಳಿತಕ್ಕೆ ಅಂತ್ಯ ಹಾಡಲಿದ್ದಾರೆ ಎಂದರು.

ಶಾಸಕ ಧೀರಜ್​ ಮುನಿರಾಜು ಮಾತನಾಡಿ, ದುರಾಡಳಿತದಿಂದ ರಾಜ್ಯವನ್ನು ಹಾಳು ಮಾಡುತ್ತಿರುವ ಕಾಂಗ್ರೆಸ್​ ವಿರುದ್ಧ ಹೋರಾಡಲು ಬಿಜೆಪಿ-ಜೆಡಿಎಸ್​ ಮೈತ್ರಿ ಮಾಡಿಕೊಳ್ಳಲಾಗಿದೆ. ಪಕ್ಷದ ಹಿರಿಯ ನಿರ್ಧಾರದಂತೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಾಗುವುದು ಎಂದರು.

ಸಿಎಂ ಡಿಕೆಶಿ ಅವರಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಸಿಎಂಗೆ ಬಡವರು, ರೈತರ ಪರ ಕಾಳಜಿ ಇಲ್ಲ. ಕೇವಲ ಹೂಡಿಕೆದಾರರು, ಬಂಡವಾಳಶಾಯಿಗಳ ಬಗ್ಗೆ ಮಾತ್ರ ಯೋಚನೆ ಇದೆ. ಮೈತ್ರಿ ನಾಯಕರು ಸ್ಥಳಿಯ ಸಂಸ್ಥೆಯ ಚುನಾವಣೆ ಎದುರಿಸಲು ಸಿದ್ಧರಾಗಬೇಕು ಎಂದು ತಿಳಿಸಿದರು.

ಎನ್​ಡಿಎ ಅಭ್ಯರ್ಥಿ ರಂಗನಾಥ ಮಾತನಾಡಿ, ಶಿಕ್ಷಕರ ಕ್ಷೇತ್ರಕ್ಕೆ ಮೈತ್ರಿ ನಾಯಕರು ಅಪಾರ ಕೊಡುಗೆ ನೀಡಿದ್ದಾರೆ. ಕಳೆದ ಬಾರಿ ಪುಟ್ಟಣ್ಣ 15 ದಿನಗಳಲ್ಲಿ ಒಪಿಎಸ್​ ಜಾರಿ, ಆರೋಗ್ಯ ವಿಮೆ ಮಾಡಿಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಎಐಆರ್​, ಸೆನ್ಸಸ್​ ಸೇರಿ ಹಲವು ಕಾರ್ಯಗಳಿಗೆ ಶಿಕ್ಷಕರಿಗೆ ಹೊಣೆ ನೀಡಲಾಗುತ್ತಿದೆ ಎಂದರು.

ಬಿಜೆಪಿ ಉಸ್ತುವಾರಿ ಗೋಪಿನಾಥರೆಡ್ಡಿ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸಮೂರ್ತಿ, ಚಂದ್ರಣ್ಣ, ಜೆಡಿಎಸ್​ ಜಿಲ್ಲಾಧ್ಯಕ್ಷ ಮಂಜುನಾಥ್​, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬಿಜೆಪಿ ಉಸ್ತುವಾರಿ ಗೋಪಿನಾಥರೆಡ್ಡಿ, ಮುಖಂಡರಾದ ಹರೀಶ್​ ಗೌಡ, ನಾಗೇಶ್​ ಇತರರು ಇದ್ದರು.

ಸಿಎಂ ಹೇಳಿಕೆ ಖಂಡನೀಯ : ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉದ್ದೇಶಿಸಿರುವ ಉರ್ದು ಆಚರಣೆಯನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಜನತಾದಳವು ಎಂದಿಗೂ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಜಾತ್ಯತಿತ ನಿಲುವಿನ ಆಧಾರದ ಮೇಲೆಯೇ ಪಕ್ಷ ಕಟ್ಟಲಾಗಿದೆ. ಒಂದು ಧರ್ಮವನ್ನು ಓಲೈಸಲು ಮತ್ತೊಂದು ಧರ್ಮವನ್ನು ಕೀಳಾಗಿ ನೋಡುವ ಮನೋಭಾವ ಬಿಟ್ಟು ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು.

ಸಿಎಂ ಡಿಕೆಶಿ ಅವರು ವೀರಶೈವ ಸ್ವಾಮೀಜಿಗಳ ಮುಂದೆ ನಿಂತು ಮಾತನಾಡಿರುವ ರೀತಿ ಖಂಡನೀಯ. ನಮ್ಮ ಸೇವೆ ಮಾಡಿದರೆ ನಿಮಗೆ ಸಹಕಾರ ನೀಡುತ್ತೇವೆ ಎಂಬ ರೀತಿಯ ಮಾತುಗಳನ್ನು ಸ್ವಾಮೀಜಿಗಳ ಮುಂದೆ ಹೇಳುವುದು ಸರಿಯಲ್ಲ. ಇಂತಹ ಉದ್ಧಟತನ ಹಾಗೂ ದುರಹಂಕಾರದ ಮಾತುಗಳನ್ನು ಸಿಎಂ ಬಿಡಬೇಕು ಎಂದು ನಿಖಿಲ್​ ಕುಮಾರಸ್ವಾಮಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net