

ಹೊಸಕೋಟೆ : ವಿಶ್ವದ ಉತ್ಪಾದನಾ ವಲಯಕ್ಕೆ ಮೆಕ್ಇನ್ ಇಂಡಿಯಾ ಅಭೂತಪೂರ್ವ ಕೊಡುಗೆ ನೀಡುತ್ತಿದ್ಡು, ಮುಂದಿನ ದಿನಗಳಲ್ಲಿ ಉತ್ಪಾದನಾ ರಂಗವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ಜೆಕ್ ಗಣರಾಜ್ಯ ಮುಂದಾಗಲಿದೆ ಎಂದು ಜೆಕ್ಗಣರಾಜ್ಯದ ಉಪಪ್ರಧಾನಿ ಕಾರೆಲ್ ಹಾವ್ಲಿಚೆಕ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಚೊಕ್ಕಹಳ್ಳಿ-ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಗೋಪಾಲನ್ ಎಂಟರ್ಪೆಸಸ್ನ ಅಂಗಸಂಸ್ಥೆಯಾದ ಗೋಪಾಲನ್ ಏರೋಸ್ಪೇಸ್ ಇಂಡಿಯಾ ಪೆವೇಟ್ ಲಿಮಿಟೆಡ್ನಿಂದ ಏರೋಸ್ಪೇಸ್, ಕೃಷಿ, ಆರೋಗ್ಯ, ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅನುಕೂಲವಾಗುವ ಯುಎವಿ, ಅಗ್ನಿ ಸುರಕ್ಷತೆ, ಸುಧಾರಿತ ಕೋಟಿಂಗ್ ತಂತ್ರಜ್ಞಾನ ಮತ್ತು ಮಾನವರಹಿತ ಸಂಚಾರ ನಿರ್ವಹಣೆ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಐದು ಎಂಒಯುಗಳಿಗೆ ಸಹಿ ಹಾಗೂ ಉತ್ಪಾದನಾ ಘಟಕದ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಮೆಕ್ ಇನ್ ಇಂಡಿಯಾ ವಲಯ ಮುಂದಿನ ದಿನಗಳಲ್ಲಿ ಮತ್ತಷ್ಟು ಒಪ್ಪಂದ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ ಕಾರೆಲ್ ಹಾವ್ಲಿಚೆಕ್, ವಿಶೇಷವಾಗಿ ಭಾರತದೊಂದಿಗಿನ ಇಂದಿನ ಒಪ್ಪಂದಗಳಿಂದ ಎರಡು ದೇಶಗಳ ನಡುವೆ ಏರೋಸ್ಪೇಸ್, ರಕ್ಷಣಾ ಮತ್ತು ಸುಧಾರಿತ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪರಸ್ಪರ ಪೂರಕ ತಂತ್ರಜ್ಞಾನಗಳು, ಕೈಗಾರಿಕಾ ಸಹಕಾರ ಮತ್ತು ಭವಿಷ್ಯದ ಉತ್ಪಾದನಾ ಅವಕಾಶಗಳನ್ನು ಅನ್ವೇಷಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಗೋಪಾಲನ್ ಮತ್ತು ಚೆಕ್ ಗಣರಾಜ್ಯದ ಪಾಲುದಾರ ಕಂಪನಿಗಳ ನಡುವೆ ಅಗ್ನಿಶಾಮಕ ಪರಿಹಾರದ ಸ್ಥಿರ-ರೆಕ್ಕೆಯ ಡ್ರೋನ್, ಕ್ವಾಡ್ಕಾಪ್ಟರ್ ಮತ್ತು ಸಂಬಂಧಿತ ವ್ಯವಸ್ಥೆಗಳು ಸೇರಿದಂತೆ ಮಾನವರಹಿತ ವೈಮಾನಿಕ ವಾಹನಗಳು, ಥಮೋರ್ರೆಫ್ಲೆಕ್ಟಿವ್ ಕೋಟಿಂಗ್ ತಂತ್ರಜ್ಞಾನ, ಮಾನವರಹಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳು, ಜೆಟ್ ಚಾಲಿತ ಮಾನವರಹಿತ ವೈಮಾನಿಕ ವಾಹನಗಳ ಉತ್ಪಾದನೆಗೆ ಸಂಬಂದಿಸಿದಂತೆ ಐದು ಎಂಒಯು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಗೋಪಾಲನ್ ಎಂಟರ್ಪೆಸಸ್ನ ನಿರ್ದೇಶಕ ಸಿ.ಪ್ರಭಾಕರ್ ಮಾತನಾಡಿ, ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಎಚ್ಎಎಲ್, ಐಎಐ, ಎಲ್ಅಂಡ್ಟಿ, ಡಿಆರ್ಡಿಒ, ಟಿಎಎಸ್ಎಲ್, ಇಸ್ರೋ, ಎನ್ಎಎಲ್, ಎಕ್ಸ್ ಪಿಎಲ್ಇಒ ಇಸಿಐಎಲ್ ಸೇರಿದಂತೆ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸಲಿದೆ. ಸದ್ಯ ಏರೋಸ್ಪೇಸ್ ವಾರ್ಷಿಕ ಸುಮಾರು 20 ಮಿಲಿಯನ್ ಯುಎಸ್ ಡಾಲರ್ ಆದಾಯ ಗಳಿಸುತ್ತಿದೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ.50ರಷ್ಟು ಬೆಳವಣಿಗೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಎಂದರು.
ಬುದ್ಧಿವಂತಿಕೆ ಹರಸುವ ನಗರ ಬೆಂಗಳೂರು : ಬೆಂಗಳೂರು ನಗರ ಐಟಿ ಹಬ್, ಎಲೆಕ್ಟ್ರಿಕಲ್, ತಂತ್ರಜ್ಞಾನವಲ್ಲದೇ ಬುದ್ಧಿವಂತಿಕೆ ಹರಸುವ ನಗರವಾಗಿ ಬೆಳೆಯುತ್ತಿದೆ. ರಾಜ್ಯದಿಂದ ಟ್ರಿಲಿಯನ್ ಡಾಲರ್ನಷ್ಟು ಆರ್ಥಿಕ ಉತ್ಪನ್ನ ಉತ್ಪಾದಿಸಲ್ಪಡುತ್ತಿದೆ. ಮುಂದಿನ ದಿನಗಳಲ್ಲಿ ಒಂದುಲಕ್ಷ ಕೋಟಿಯಷ್ಟು ಉತ್ಪನ್ನ ಹೊರ ಬರುವಂತಹ ಕಾರ್ಯ ರಾಜಧಾನಿಯಿಂದಾಗಲಿದೆ. ಅದೂ ಹೊಸಕೋಟೆಯ ಕೈಗಾರಿಕಾ ಪ್ರದೇಶದಿಂದಲೇ ಶುರುವಾಗಲಿ. ಇಂದು ಕರ್ನಾಟಕದ ಬೆಂಗಳೂರು&ಮೈಸೂರು, ಮಂಗಳೂರು, ಹುಬ್ಬಳ್ಳಿಯಂತಹ ನಗರಗಳು ಅತ್ಯಾಧುನಿಕ ತಂತ್ರಜ್ಞಾನವು ಜಗತ್ತಿನ ಮುಂದೆ ಗೊಚರಿಸಲ್ಪಡುವಂತೆ ವೇಗವಾಗಿ ಬೆಳೆಯುತ್ತಿವೆ ಎಂದು ಶಾಸಕ ಶರತ್ ಬಚ್ಚೆಗೌಡ ಹೇಳಿದರು.
ಸಂದರ್ಭದಲ್ಲಿ ಗೋಪಾಲನ್ ಏರೋಸ್ಪೆಸ್ ಸಿಬ್ಬಂದಿ ಹಾಗೂ ಜೆಕ್ ಗಣರಾಜ್ಯದ ವಿಶೇಷ ಅತಿಥಿಗಳು ಉಪಸ್ಥಿತರಿದ್ದರು.