

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮುಂಗಾರು ಕೈಕೊಟ್ಟ ಮಳೆ ಹಿಂಗಾರಿನಲ್ಲಿ ತುಸು ಭರವಸೆ ಮೂಡಿಸಿದರೂ ರಾಗಿ ಬೆಳೆಗೆ ಅಗತ್ಯವಿರುವಷ್ಟು ತೇವಾಂಶ ದೊರಕದ ಕಾರಣ ಈ ಬಾರಿಯ ಇಳುವರಿಯಲ್ಲಿ ಗುಣಮಟ್ಟದ ಸಲು ದೊರೆಯುವುದು ಕಷ್ಟಸಾಧ್ಯ ಎಂಬ ಆತಂಕ ಎದುರಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ರಾಗಿಯನ್ನು ಪ್ರಧಾನವಾಗಿ ಬೆಳೆಯಲಾಗುತ್ತದೆ. ಹೈನುಗಾರಿಕೆಯಲ್ಲಿಯೂ ಜಿಲ್ಲೆ ಮುಂಚಣಿಯಲ್ಲಿರುವುದರಿಂದ ಮೇವಿಗೂ ರಾಗಿ ಹುಲ್ಲಿನ ಬಳಕೆ ಸಾಮಾನ್ಯವಾಗಿದೆ. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಇಳುವರಿಗೆ ಪೆಟ್ಟು ನೀಡುವುದರ ಜತೆಗೆ ಗುಣಮಟ್ಟಕ್ಕೂ ಹೊಡೆತ ಬೀಳಲಿದೆಯೇ ಎಂಬ ದುಗುಡ ರೈತಾಪಿ ವಲಯದಲ್ಲಿ ಕೇಳಿಬರುತ್ತಿದೆ ಇದರಿಂದ ಮುಂದಿನ ದಿನಗಳಲ್ಲಿ ಜಾನುವಾರು ಮೇವಿಗೂ ಪರದಾಡುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ಕಾಡತೊಡಗಿದೆ. ಜುಲೈನಿಂದ ಆಗಸ್ಟ್ವರೆಗೆ ನಿರೀೆಯಂತೆ ಮುಂಗಾರು ಮಳೆ ಸುರಿದಿಲ್ಲ ಆದರೆ ಅಕ್ಟೋಬರ್ನಲ್ಲಿ ಹಿಂಗಾರು ತುಸು ಭರವಸೆ ಮೂಡಿಸಿತ್ತು. ಆದರೆ ಅದೂ ಸಹ ನಿರೀೆಯಷ್ಟು ಆಗಲಿಲ್ಲ. ಪರಿಣಾಮವಾಗಿ ಚಿಗುರಿದ್ದ ಭರವಸೆಯೂ ನಿರಾಸೆಯಾಗುವಂತಾಗಿದೆ ಇದು ನೇರವಾಗಿ ಸಲಿನ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಕೃಷಿ ಇಲಾಖೆಯ ಅನುಮಾನವಾಗಿದೆ.
ಗುಣಮಟ್ಟದ ಕೊರತೆ: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ 74 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೇಸಾಯ ಮಾಡಲಾಗುತ್ತದೆ. ಸುಮಾರು 900 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಕೃಷಿ ನಡೆಯಲಿದೆ. ಮುಂಗಾರು ಮಳೆ ಪ್ರಾರಂಭದಲ್ಲಿಯೇ ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಾಗಿ ಬಿತ್ತನೆ ತಡವಾಗಿತ್ತು. ನಂತರದ ದಿನಗಳಲ್ಲಿ ಸಾಧಾರಣ ಮಳೆಯಿಂದಾಗಿ ರೈತರು ಅನುಮಾನದಲ್ಲೇ ರಾಗಿ ಬಿತ್ತನೆಗೆ ಮುಂದಾಗಿದ್ದರು. ನಂತರದಲ್ಲಿ ಮಳೆ ಮತ್ತೆ ಕೈಕೊಟ್ಟಿದ್ದರಿಂದ ಪೈರುಗಳು ಒಣಗಲು ಆರಂಭಿಸಿತ್ತು. ಹಿಂಗಾರು ಅವಧಿಯಲ್ಲಿನ ಸುರಿದ ಸಾಧಾರಣ ಮಳೆಯಿಂದಾಗಿ ಪೈರುಗಳು ಚಿಗುರಿದರೂ ತೆನೆ ಕಟ್ಟಿದ ರಾಗಿಯಲ್ಲಿ ಗುಣಮಟ್ಟದ ಕೊರತೆ ಕಂಡುಬರುತ್ತಿದೆ ಎನ್ನಲಾಗಿದೆ.
ಬಂಡವಾಳಕ್ಕೂ ಕುತ್ತು: ಮುಂಗಾರು ವೇಳೆ ಪ್ರತಿ ಎಕರೆಗೆ ರಾಗಿ ಬೆಳೆಯಲು 40 ರಿಂದ 50 ಸಾವಿರ ರೂಪಾಯಿ ವೆಚ್ಚವಾಗಲಿದೆ, ಇದರ ಜತೆಗೆ ಉಳುಮೆ, ಬಿತ್ತನೆ ಬೀಜ, ಕೃಷಿ ಕಾರ್ಮಿಕರ ಕೂಲಿ, ರಸ ಗೊಬ್ಬರ ಸೇರಿ ಕೃಷಿಗೆ ಬಳಕೆಯಾಗುವ ಅಗತ್ಯ ವಸ್ತುಗಳ ಬೆಲೆಯೂ ದುಬಾರಿಯಾಗಿದೆ ಇದರಿಂದ ಹಾಕಿದ ಬಂಡವಾಳವೂ ವಾಪಸ್ ಬರುವುದು ಅನುಮಾನ ಎಂಬ ಪರಿಸ್ಥಿತಿ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಹೈನುಗಾರಿಕೆಯಲ್ಲಿನ ರೈತರಿಗೂ ಜಾನುವಾರು ಮೇವಿನ ಕೊರತೆ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ. ಹಲವು ಕಡೆಗಳಲ್ಲಿ ರಾಗಿ ಪೈರು ನೆಲಕಚ್ಚಿವೆ, ಅನೇಕ ಕಡೆಗಳಲ್ಲಿ ನೋಡಲು ಪೈರುಗಳು ಎತ್ತರಕ್ಕೆ ಬೆಳೆದು ತೆನೆಗಳು ಕಂಡುಬರುತ್ತಿದ್ದರೂ ಅದರಲ್ಲಿ ರಾಗಿ ಕಾಳುಗಳ ಪ್ರಮಾಣ ಕಡಿಮೆ ಇದೆ. ಜತೆಗೆ ಈ ಹಿಂದಿನಂತೆ ಗುಣಮಟ್ಟದ ರಾಗಿ ಕಾಣಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ ಬೆಳೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಳೆ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ. ಜತೆಗೆ ಬಹೊಸ ರಾಗಿ ತಳಿಗಳನ್ನು ಪರಿಚಯಿಸುವ ಕೆಲಸವೂ ಆಗುತ್ತಿದೆ. ಮಳೆ ಕೊರತೆ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
-> ಕಲಾವತಿ, ಜಂಟಿ ನಿರ್ದೇಶಕಿ ಬೆಂ.ಗ್ರಾಮಾಂತರ
&&&&&&
ಯಾವುದೇ ನದಿ ಮೂಲವಿಲ್ಲದ ಜಿಲ್ಲೆಯಲ್ಲಿ ಮಳೆಯಾಶ್ರಿತ ರಾಗಿ ಬೆಳೆಯನ್ನೇ ಎಲ್ಲರೂ ಅವಲಂಬಿಸಿದ್ದಾರೆ. ಈ ಬಾರಿ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಹಿಂಗಾರಿನಲ್ಲೂ ನಿರೀತ ಮಳೆಯಾಗದೆ ರಾಗಿ ಸಲು ಕೈಸೇರುವ ನಿರೀೆಯೇ ಇಲ್ಲದಂತಾಗಿದೆ. ಕೆಲವು ಕಡೆಗಳಲ್ಲಿ ರಾಗಿ ತೆನೆಗಳು ಕಂಡುಬರುತ್ತಿದ್ದರೂ ಗುಣಮಟ್ಟದ ಕೊರತೆ ಕಾಡುತ್ತಿದೆ. ಇದರಿಂದ ಈ ಬಾರಿ ರಾಗಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.
> ಶಿವನಂಜಪ್ಪ, ಸಾಧನಹಳ್ಳಿ