ಪಾಳುಬಾವಿಯಲ್ಲಿ 3 ಜಿಂಕೆಗಳ ಚರ್ಮ ಪತ್ತೆ

3 deer skins discovered
3 deer skins discovered
3 deer skins discovered
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಬನಹಳ್ಳಿ ಮತ್ತು ಗೆದ್ದಲಹಳ್ಳಿಪುರ ಗ್ರಾಮಗಳ ನಡುವಿನಲ್ಲಿನ ಪಾಳುಬಾವಿಯೊಂದರಲ್ಲಿ ಮೂಟೆ ಕಟ್ಟಿ ಎಸೆದಿದ್ದ 3 ಜಿಂಕೆಗಳ ಚರ್ಮ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಜಾನುವಾರು ಮೇಯಿಸಲು ಹೋಗಿದ್ದ ಸ್ಥಳಿಯ ರೈತರು ಪಾಳು ಬಾವಿಯ ಬಳಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ವೇಳೆ ಬಾವಿಯೊಳಗೆ ಮೂಟೆಗಳು ತೇಲಾಡುತ್ತಿರುವುದು ಕಂಡುಬಂದಿದೆ. ಸಂಶಯಗೊಂಡ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಕಾರ್ಯಾಚರಣೆ: ಸುದ್ದಿ ತಿಳಿದ ಅರಣ್ಯ ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಸ್ಥಳಕ್ಕೆ ದಾವಿಸಿ ಕಾರ್ಯಾಚರಣೆ ಮೂಲಕ ಮೂಟೆಗಳನ್ನು ಬಾವಿಯಿಂದ ಹೊರತೆಗೆದು ಪರಿಶೀಲನೆ ನಡೆಸಿದಾಗ ಮೂಟೆಯೊಳಗೆ ಪ್ರತ್ಯೇಕವಾಗಿ ಮೂರು ಜಿಂಕೆಗಳ ಚರ್ಮ ಕಂಡುಬಂದಿದೆ.

ಸ್ಥಳಿಯರ ಪ್ರತಿಭಟನೆ:ಅಧಿಕಾರಿಗಳ ರ್ನಿಲಕ್ಷದಿಂದ ಈ ಭಾಗದಲ್ಲಿ ಕಾಡು ಪ್ರಾಣಿಗಳ ಬೇಟೆ ಹೆಚ್ಚಾಗುತ್ತಿದೆ.ಹಂತಕರನ್ನು ಕೂಡಲೇ ಪತ್ತೆ ಹಚ್ಚಬೇಕು, ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕಾನೂನು ಜರುಗಿಸಬೇಕು ಎಂದು ಸ್ಥಳಿಯರು ಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಜಿಂಕೆಗಳನ್ನು ಬೇಟೆಯಾಡಿ ಚರ್ಮವನ್ನು ಬಾವಿಯಲ್ಲಿ ಬಿಸಾಡಿರುವ ಬಗ್ಗೆ ಮಾಹಿತಿ ನೀಡಲು ಹಲವು ಬಾರಿ ಕರೆ ಮಾಡಿದರೂ ವಲಯ ಅರಣ್ಯಾಧಿಕಾರಿ ಕೆರೆ ಸ್ವೀಕರಿಸಲಿಲ್ಲ. ಇದು ಇದೇ ಮೊದಲ ಬಾರಿಯಲ್ಲಿ ವನ್ಯಜಿವಿಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಕರೆ ಮಾಡಿದರೂ ಅಧಿಕಾರಿ ಕರೆ ಸ್ವೀಕರಿಸುವುದಿಲ್ಲ ಎಂಬುದು ಈ ಭಾಗದ ಎಲ್ಲ ಜನರ ಆರೋಪವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಬೇಕಿದೆ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಅರಣ್ಯ ಸಿಬ್ಬಂದಿ ಸೂಚನೆಯಂತೆ ಮೂಟೆಗಳನ್ನು ಪರಿಶೀಲಿಸಿದಾಗ 3 ಚರ್ಮಗಳು ಪತ್ತೆಯಾಗಿದೆ. ಅವು ಜಿಂಕೆಗಳ ಚರ್ಮವೆಂದು ದೃಢಪಟ್ಟಿದೆ. ಇದರ ಬಗ್ಗೆ ಉನ್ನತ ಪರಿಶೀಲನೆ ನಡೆಸಬೇಕಿದ್ದು ನಂತರದಲ್ಲಿ ಹೆಚ್ಚಿನ ಮಾಹಿತಿ ದೊರೆಯಲಿದೆ. ಈ ಬಗ್ಗೆ ಮೇಲಾಧಿಕಾರಿ ಸೂಚನೆಯಂತೆ ಮುಂದಿನ ಕ್ರಮ ವಹಿಸಲಾಗುವುದು.

-> ಡಾ.ಚಂದ್ರಶೇಖರ್​, ಪಶುವೈದ್ಯಾಧಿಕಾರಿ ನಂದಗುಡಿ.