ಸೌಂಡ್‌ಲೆಸ್, ಸುಲಲಿತ ಸವಾರಿಗೆ ಎಕ್ಸ್‌ಇವಿ 9ಎಸ್

xuv vehical
xuv vehical
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಆಧುನಿಕ ಜೀವನ ಶೈಲಿಯ ಯಾಂತ್ರಿಕ ಬದುಕಿನಲ್ಲಿ ಎಲ್ಲರಿಗೂ ಒಂದು ವಿಶೇಷ ಸ್ಥಳಾವಕಾಶ ಅತ್ಯವಶ್ಯಕವಾಗಿದ್ದು ಇದೊಂದು ಮಹತ್ವದ ಸಂಗತಿ ಎನಿಸಿದೆ. ದಿನನಿತ್ಯದ ಬದುಕಿನಲ್ಲಿ ವಿಶ್ರಮಿಸಲು ಸೂಕ್ತ ಸ್ಥಳ ಬೇಕು, ಯಾವುದಾದರೂ ಚಿಂತನೆಗೆ ಪೂರಕವೆನಿಸುವ ಸ್ಥಳ ಬೇಕೆ ಬೇಕು. ನಮ್ಮ ಜೀವನಕ್ಕೆ ಮುಖ್ಯರಾದವರೊಂದಿಗೆ ಸಮಯ ಕಳೆಯಲು ಸೂಕ್ತ ಸ್ಥಳ ಬೇಕು, ಕಡೆಗೆ ನಾವೇ ನಾವಾಗಿರಲೂ ವಿಶೇಷವಾದ ಸ್ಥಳ ಬೇಕೆನ್ನುವ ಭಾವನೆ ಮೂಡುವುದು ಸಹಜ... ಮಾನವ ಸಹಜ ಈ ಭಾವನೆ ಅರ್ಥೈಸಿಕೊಂಡಿರುವಂತೆ ಮಹೀಂದ್ರಾ ಕಂಪನಿ ಹೊಸ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ)ಪರಿಕಲ್ಪನೆಯಲ್ಲಿ ಎಕ್ಸ್‌ಇವಿ 9ಎಸ್ (ಗಿಉ್ಖ 9ಖ) ನ್ನು ವಿನ್ಯಾಸಗೊಳಿಸಿದೆ.
ರೆಸಾರ್ಟ್‌ನಲ್ಲಿ ಬಿಡುಗಡೆ:
ದೇವನಹಳ್ಳಿಯ ಜೆಡಬ್ಲ್ಯು ಮ್ಯಾರಿಟ್ಟೋ ಪ್ರೆಸ್ಟೀಜ್ ಗಾಲ್ಪ್‌ಶೈರ್‌ರೆಸಾರ್ಟ್‌ನಲ್ಲಿ ಗುರುವಾರ ಆಯೋಜಿಸಿದ್ದ ಎಕ್ಸ್‌ಇವಿ 9ಎಸ್ ವಾಹನಗಳ ಟೆಸ್ಟ್‌ಡ್ರೈವ್ ಹಾಗೂ ಎಕ್ಸ್‌ಇವಿ ಲಾಂಚ್ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಎಕ್ಸ್‌ಇವಿ ಹೊಸ ಕಾರುಗಳ ಬಗ್ಗೆ ಸಂಪೂರ್ಣ ವಿವರಣೆಯೊಂದಿಗೆ ಡ್ರೈವಿಂಗ್ ಅನುಭವನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಬ್ರ್ಯಾಂಡ್‌ಗಳಿಗಷ್ಟೇ ಸೀಮಿತವಲ್ಲ:
ಕೇವಲ ವಿದ್ಯುತ್‌ಚಾಲಿತ ವಾಹನಗಳ ಬ್ರ್ಯಾಂಡ್‌ಗಳಿಗಷ್ಟೇ ಸೀಮಿತವಾಗಿರದೆ, ಹೊಸ ಹೊಸ ಮಾದರಿಗಳನ್ನು ಮರುರೂಪಿಸುವುದು ಬಹಳ ಮುಖ್ಯ. ಗಿಉ್ಖ 9ಖ
ಮೂಲಕ ನಾವು ವಿದ್ಯುತ್‌ಚಾಲಿತ ವಾಹನಗಳ (ಇವಿ) ವಿಭಾಗದಲ್ಲಿ ಈ ಚಿಂತನೆಯನ್ನು ದೊಡ್ಡದಾಗಿ ವಿಸ್ತರಿಸುತ್ತಿದ್ದೇವೆ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ಆಟೊಮೋಟಿವ್ ವಿಭಾಗದ ಸಿಇಒ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೊಮೊಬೈಲ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ನಳಿನಿಕಾಂತ್ ಗೊಲ್ಲಗುಂಟಾ ಹೆಮ್ಮೆ ವ್ಯಕ್ತಪಡಿಸಿದರು.
ಜನರಿಗೆ ಹೆಚ್ಚುವರಿ ಕೊಡುಗೆ:
ತಂತ್ರಜ್ಞಾನವು ಮಾನವನ ಸಾಧ್ಯತೆಯನ್ನು ವಿಸ್ತರಿಸಿದಾಗ ಮಾತ್ರ ತಂತ್ರಜ್ಞಾನಕ್ಕೆ ಅರ್ಥ ಬರುತ್ತದೆ ಎಂದು ನಾವು ಯಾವಾಗಲೂ ನಂಬಿದ್ದೇವೆ. ಐಘೆಎಔ ಒರಿಜಿನ್ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಿರುವ ಎಕ್ಸ್‌ಇವಿ 9ಎಸ್ ಹೆಚ್ಚಿನ ಸ್ಥಳಾವಕಾಶವನ್ನು ಬೇರೆಯವರಿಗಿಂತ ಹೆಚ್ಚು ನಿಖರವಾಗಿ ಒದಗಿಸುತ್ತಿದೆ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೊಮೋಟಿವ್ ಬಿಸಿನೆಸ್ ಅಧ್ಯಕ್ಷ ಮತ್ತು ಮಹೀಂದ್ರಾ ಎಲೆಕ್ಟ್ರಿಕ್ ಆಟೊಮೊಬೈಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಆರ್.ವೇಲುಸಾಮಿ ಹೇಳಿದ್ದಾರೆ.
ಆರಂಭಿಕ ಬೆಲೆ 19.95 ಲಕ್ಷ ರೂ.:
19.95 ಲಕ್ಷ ರೂ.ನಿಂದ ಪ್ರಾರಂಭವಾಗುವ ಆಕರ್ಷಕ ಬೆಲೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಎಸ್‌ಯುವಿ ನಿಮ್ಮದಾಗಲಿದೆ ಹೊಸ ವರ್ಷ 2026ರ ಜ.14 ರಿಂದ ಬುಕಿಂಗ್ ಆರಂಭವಾಗಲಿದ್ದು, ಜ.23 ರಿಂದ ವಿತರಣೆಗೆ ಚಾಲನೆ ದೊರೆಯಲಿದೆ.
ಪ್ರತ್ಯೇಕ ಬಾಕ್ಸ್()
180 ಕೆಡಬ್ಲ್ಯೂ ಅಲ್ಟ್ರಾಫಾಸ್ಟ್ ಚಾರ್ಜಿಂಗ್ ಜಾಲ:
ಸಂಸ್ಥೆಯು 180 ಕೆಡಬ್ಲ್ಯೂ ಸಾಮರ್ಥ್ಯದ ಅತಿ ವೇಗದ ಚಾರ್ಜರ್‌ಗಳನ್ನು ಹೊಂದಿರುವ 250 ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವ ಯೋಜನೆ ಘೋಷಿಸಿದೆ. ಈಗಾಗಲೇ ಎರಡು ಕಾರ್ಯಾರಂಭ ಮಾಡಿದ್ದು, 2027ರ ಅಂತ್ಯದೊಳಗೆ ಸಾವಿರಕ್ಕೂ ಹೆಚ್ಚು ಸ್ಥಾಪಿಸುವ ಗುರಿ ಹೊಂದಿದೆ. ಆರಂಭಿಕ ಹಂತದಲ್ಲಿ ಬೆಂಗಳೂರು- ಚೆನ್ನೈ ಎನ್‌ಎಚ್ 75ರಲ್ಲಿ 2 ಚಾರ್ಜಿಂಗ್ ಸ್ಟೇಷನ್ ಆರಂಭಿಸಲಾಗಿದೆ. ಇದು ಭಾರತದ ಹೈ- ಸ್ಪೀಡ್ ಇವಿ ಚಾರ್ಜಿಂಗ್ ನಿರ್ಮಾಣದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಒಮ್ಮೆಗೆ 4 ಇವಿಗಳನ್ನು ಚಾರ್ಜ್ ಮಾಡಬಲ್ಲ ಸಾಮರ್ಥ್ಯವಿದೆ.
*ಸದ್ದುರಹಿತ ಮತ್ತು ಸುಲಲಿತ ಸವಾರಿಯ ಎಸ್‌ಯುವಿ
* ಐಘೆಎಔ ವೇದಿಕೆ ಮತ್ತು ಎಂಎಐಎ ಬುದ್ಧಿವಂತಿಕೆ ಆಧರಿಸಿ ಕಾರ್ಯನಿರ್ವಹಣೆ
* ಅತ್ಯುತ್ತಮ ಸ್ಥಳಾವಕಾಶ
ಸಂಪೂರ್ಣ ಸುಸಜ್ಜಿತ 6 ಮಾದರಿಗಳು
*79 ಕಿ.ವ್ಯಾ.ಗಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯದ ಮೂರು ಎಸ್‌ಯುವಿ-ಗಳ ಎಕ್ಸ್‌ಷೋರೂಂ ಬೆಲೆ 29.45 ಲಕ್ಷ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net