97 ಕೋಟಿ ರೂ.ಗೆ ಏರಿದ ಕಾಮಗಾರಿ ವೆಚ್ಚ: ಈ ಕಾಮಗಾರಿಯ ಡಿಪಿಆರ್ಅನ್ನು 2018ರಲ್ಲೇ ತಯಾರಿಸಿ ಅನುಮೋದನೆ ನೀಡಲಾಗಿತ್ತು. ಅಂದಿನ ಮೊತ್ತ 47 ಕೋಟಿ ರೂ. ಆಗಿತ್ತು. ಆದರೆ ಈ ಭಾಗದಲ್ಲಿ ಕೆ.ಸಿ.ವ್ಯಾಲಿ ನೀರಿನ ಪೈಪ್ ಲೈನ್ ಅಳವಡಿಸಿರುವುದರಿಂದ ಮೊದಲು ನಿರ್ಧರಿಸಿದ್ದ ಮೇಲ್ಸೇತುವೆ ಬದಲಿಗೆ ಪಿಲ್ಲರ್ ಅಳವಡಿಸಿ ಮೇಲ್ಸೇತುವೆ ನಿಮಾರ್ಣಕ್ಕೆ ಮರು ಡಿಪಿಆರ್ ಸಿದ್ಧಪಡಿಸಲಾಗಿದ್ದು, ಕಾಮಗಾರಿಯ ವೆಚ್ಚ 97 ಕೋಟಿ ರೂ.ಗೆ ಏರಿದೆ. ಕೇಂದ್ರ ಸರ್ಕಾರ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದು, ಶಾಸಕ ಶರತ್ ಬಚ್ಚೇಗೌಡ ಅವರು ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರನ್ನು ಕರೆತಂದು, ಸಮಸ್ಯೆ ಬಗ್ಗೆ ಮನವರಿಕೆ ಮಾಡಿಸಿದ್ದರು. ಅದರ ಲವಾಗಿ ಲೋಕೋಪಯೋಗಿ ಇಲಾಖೆಯಿಂದ 36 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ 18.25 ಕೋಟಿ ರೂ. ಹಣ ಮಂಜೂರು ಮಾಡಿಸಿದ್ದು, ಹಣ ಬಿಡುಗಡೆಯಾಗಿದೆ. ಶ್ರೀದಲ್ಲೇ ಕಾಮಗಾರಿ ಚಾಲನೆ ದೊರೆಯಲಿದೆ ಎಂದು ಹೊಸಕೋಟೆ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೊರಳೂರು ಸುರೇಶ್ ಹೇಳಿದರು.