ಕಾರ್ಯಕ್ರಮದ ದಿನದಂದು ಪಾದಯಾತ್ರೆಯಲ್ಲಿ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸುವರು. ಕಾರ್ಯಕ್ರಮದಲ್ಲಿ ಭಾಗವಹಿಸವವರಿಗೆ ಟಿ-ಶ್‌ರ್ಟ್, ಪ್ರಮಾಣ ಪತ್ರ ಹಾಗೂ ಲಘುಉಪಹಾರ ವ್ಯವಸ್ಥೆ ಆಯೋಜಿಸಲಾಗುತ್ತದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವಚ್ಛತಾ ಶ್ರಮದಾನ, ಹೆಲ್ತ್ ಕ್ಯಾಂಪ್, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವೇದಿಕೆ ಕಾರ್ಯಕ್ರಮ ಇರಲಿದೆ ಎಂದರು. ಜಿಲ್ಲೆಯ ಯುವಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಏಕತಾ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟಿನ ಮನೋಭಾವ ಪ್ರದರ್ಶಿಸಿ ಸರ್ದಾರ್ ಪಟೇಲ್ ಅವರ ಏಕತಾ ಭಾರತದ ದೃಷ್ಟಿಕೋನವನ್ನು ನಾವೆಲ್ಲರೂ ಗೌರವಿಸೋಣ ಎಂದು ಹೇಳಿದರು.