ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ 912913 ಮತದಾರರ ಪೈಕಿ 3,35,846 ಮಂದಿ ಸ್ವಯಂ ಮ್ಯಾಫಿಂಗ್ ಮಾಡಿಕೊಂಡಿದ್ದರು. ಇನ್ನೂ ಬಿಎಲ್ಒಗಳ ಮೂಲಕ 4,43,992 ಮಂದಿ ಮತದಾರರ ಮ್ಯಾಫಿಂಗ್ ಮಾಡಲಾಗಿದೆ. ಹೊಸಕೋಟೆಯಲ್ಲಿ 7813 ಮಂದಿ ಮಾಡಲಾಗಿಲ್ಲ. ದೇವನಹಳ್ಳಿಯಲ್ಲಿ 8764, ದೊಡ್ಡಬಳ್ಳಾಪುರದಲ್ಲಿ 5767, ನೆಲಮಂಗಲದಲ್ಲಿ 7427 ಮಂದಿ ಮ್ಯಾಫಿಂಗ್ ಬಾಕಿಯಿದ್ದು, 26,299 ಮತದಾರರ ಮ್ಯಾಫಿಂಗ್ ಜಿಲ್ಲೆಯಲ್ಲಿ ಬಾಕಿಯಿದೆ. ಇನ್ನೂ ವಿಳಾಸ ತಪ್ಪುಗಳು, ಹೆಸರಲ್ಲಿ ದೋಷಗಳು ಸೇರಿ ವಿವಿಧ ಮಾಹಿತಿಯ ದೋಷಗಳಿರುವ 30070 ಮತದಾರರು ಇರುವುದು ಕಂಡು ಬಂದಿದೆ. ಈ ಮೂಲಕ ಮ್ಯಾಫಿಂಗ್ ಇಲ್ಲದ, ಒಂದಷ್ಟು ತಪ್ಪುಗಳಿರುವ 56,369 ಮತದಾರರ ಚೀಟಿಗಳು ಕಂಡುಬಂದಿದ್ದು, ಇವರಿಗೆ ನೋಟೀಸ್ ನೀಡಿ, ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದಲ್ಲದೇ ಜಿಲ್ಲೆಯಲ್ಲಿ ಶೇ.12.79 ಮತದಾರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇದರಲ್ಲಿ ಕೆಲ ಮತದಾರರು ಸಾವನಪ್ಪಿದ್ದು, ಕೆಲವರು ಶಾಶ್ವತವಾಗಿ ಸ್ಥಳಾಂತರಗೊಂಡಿರುವ ಮತದಾರರು ಇದ್ದಾರೆ.